ಮಡಿಕೇರಿ, ಮಾ. ೧೪: ಬ್ಲಾö್ಯಕ್ ಪ್ಯಾಂರ್ಸ್ ಮಹಿಳಾ ಕ್ಲಬ್ ವತಿಯಿಂದ ಪ್ರಥಮ ವರ್ಷದ ಜಿಲ್ಲಾಮಟ್ಟದ ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ಥ್ರೋಬಾಲ್ ಪಂದ್ಯಾವಳಿ ಏ. ೯ ರಂದು ಮರಗೋಡು ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.
(ಮೊದಲ ಪುಟದಿಂದ) ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕ್ಲಬ್ ಅಧ್ಯಕ್ಷೆ ಮಿಲನ ಕಟ್ಟೆಮನೆ, ಅಂದು ಬೆಳಿಗ್ಗೆ ೯ ಗಂಟೆಗೆ ಪಂದ್ಯಾವಳಿ ನಡೆಯಲಿದ್ದು, ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಆಸಕ್ತ ತಂಡಗಳು ತಂಡದ ಹೆಸರನ್ನು ಏ. ೬ ರ ಸಂಜೆ ೫ ಗಂಟೆಯ ಒಳಗಾಗಿ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. ೯೪೮೩೪೨೬೪೭೪, ೯೪೮೨೦೨೨೧೦೦ ಸಂಪರ್ಕಿಸಬಹುದೆAದು ತಿಳಿಸಿದರು.
ವಾಲಿಬಾಲ್ನಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ರೂ. ೨೫ ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನಕ್ಕೆ ರೂ. ೧೫ ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಇದರೊಂದಿಗೆ ಬೆಸ್ಟ್ ಅಟ್ಯಾಕರ್, ಬೆಸ್ಟ್ ಡಿಫೆಂಡರ್, ಬೆಸ್ಟ್ ಪ್ಲೇಯರ್ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತದೆ.
ಥ್ರೋಬಾಲ್ನಲ್ಲಿ ಪ್ರಥಮ ಬಹುಮಾನವಾಗಿ ರೂ. ೧೫ ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ. ೧೦ ಸಾವಿರ ಮತ್ತು ಆಕರ್ಷಕ ಟ್ರೋಫಿ ಹಾಗೂ ಬೆಸ್ಟ್ ಅಟ್ಯಾಕರ್, ಬೆಸ್ಟ್ ಆಲ್ ರೌಂಡರ್ ವೈಯಕ್ತಿಕ ಬಹುಮಾನಗಳನ್ನು ನೀಡುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಕ್ಲಬ್ ಉಪಾಧ್ಯಕ್ಷೆ ಮೋನಿಕಾ ಕಟ್ಟೆಮನೆ, ಖಜಾಂಚಿ ರೀನಾ ಕಟ್ಟೆಮನೆ, ಕಾರ್ಯದರ್ಶಿ ನಮಿತಾ ಕಟ್ಟೆಮನೆ, ಕ್ರೀಡಾ ಅಧ್ಯಕೆÀ್ಷ ಬಿದ್ರುಪಣೆ ಜ್ಯೋತಿ ಉಪಸ್ಥಿತರಿದ್ದರು.