ಸುಂಟಿಕೊಪ್ಪ, ಮಾ. ೧೪: ಅಖಿಲ ಭಾರತ ನಾಗರಿಕ ಸೇವಾ ಫುಟ್ ಬಾಲ್ ಪಂದ್ಯಾಟ ಕ್ಕೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ನಾಯಕರಾಗಿ ಆಯ್ಕೆಯಾಗಿದ್ದಾರೆ.
ತಾ. ೧೮ ರಿಂದ ೨೩ರ ವರೆಗೆ ಒರಿಸ್ಸಾ ರಾಜ್ಯದ ಭುವನೇಶ್ವg Àದಲ್ಲಿರುವ ಕಳಿಂಗ ಸ್ಟೇಡಿಯಂ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ಪಂದ್ಯಾಟ ನಡೆಯಲಿದ್ದು, ಬಿ.ಎಚ್. ವೇಣುಗೋಪಾಲ್ ಅವರು ೨೦ ಮಂದಿ ಆಟಗಾರರನ್ನು ಒಳಗೊಂಡ ಕರ್ನಾಟಕ ರಾಜ್ಯ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆÀದ ವರ್ಷ ನವದೇಹಲಿಯಲ್ಲಿ ನಡೆದ ಅಖಿಲ ಭಾರತ ನಾಗರಿಕ ಸೇವಾ ಫುಟ್ಬಾಲ್ ಪಂದ್ಯಾಟದಲ್ಲಿಯೂ ವೇಣುಗೋಪಾಲ್ ಅವರು ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದರು.