ಮಡಿಕೇರಿ, ಮಾ. ೧೩ : ವೀರಾಜಪೇಟೆಯ ಕೊಡಗು ದಂತ ವೈದ್ಯಕೀಯ ಸಂಸ್ಥೆಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ತಾ.೧೫ ರಂದು ಆಯೋಜಿಸಲಾಗಿದೆ. ಹಿರಿಯ ವಕೀಲ ಹಾಗೂ ಎ.ಕೆ ಸುಬ್ಬಯ್ಯ ಪೊನ್ನಮ್ಮ ದತ್ತಿನಿಧಿ ವ್ಯವಸ್ಥಾಪಕ ಎ.ಎಸ್ ಪೊನ್ನಣ್ಣ ಅವರ ನೇತೃತ್ವದಲ್ಲಿ eviಜhಥಿಚಿ.ಛಿom ಸಹಭಾಗಿತ್ವದಲ್ಲಿ ಬೆ.೧೦:೩೦ ಗಂಟೆಗೆ ದಂತ ತಪಾಸಣಾ ಶಿಬಿರ ಪ್ರಾರಂಭವಾಗಲಿದೆ. ದಂತ ತಪಾಸಣೆ, ಬಾಯಿ ಕ್ಯಾನ್ಸರ್ ತಪಾಸಣೆ, ಹಲ್ಲು ಫಿಲ್ಲಿಂಗ್, ಕ್ಲೀನಿಂಗ್ ಹಾಗೂ ಇತರ ತಪಾಸಣೆಗಳು ನಡೆಯಲಿವೆ.