ಪೊನ್ನಂಪೇಟೆ, ಮಾ. ೧೩: ಕೇರಳದ ಇರಿಟ್ಟಿ ಸಮೀಪದ ಉಳ್ಳಿಲ್ ಎಂಬಲ್ಲಿ ಲಾರಿ ಹಾಗೂ ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪೊನ್ನಂಪೇಟೆಯ ಇಬ್ಬರು ವಾಣಿಜ್ಯೋದ್ಯಮಿಗಳು ಮೃತಪಟ್ಟ ಧಾರುಣ ಘಟನೆ ಸಂಭವಿಸಿದೆ. ಪೊನ್ನಂಪೇಟೆಯ ಲುಲ್ಲು ಶಾಪಿಂಗ್

(ಮೊದಲ ಪುಟದಿಂದ) ಸೆಂಟರ್‌ನ ಮಾಲೀಕÀ ರವೂಫ್ (೫೪) ಹಾಗೂ ಮಾರ್ಜಿನ್ ಫ್ರೀ ಸೂಪರ್ ಮಾರ್ಕೆಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಹೀಮ್ (೫೯) ಮೃತಪಟ್ಟ ದುರ್ದೈವಿಗಳು. ಇವರಿಬ್ಬರೂ ಕೇರಳದ ಕೂತುಪರಂಬುವಿನ ತಮ್ಮ ಮನೆಯಿಂದ ಪೊನ್ನಂಪೇಟೆಗೆ ಕಾರಿನಲ್ಲಿ ಬರುತ್ತಿರುವಾಗ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರಾದ ಇಬ್ಬರೂ ಮಾರ್ಜಿನ್ ಫ್ರೀ ಸೂಪರ್ ಮಾರ್ಕೆಟ್ ಮಾಲೀಕ ಆಬುಟ್ಟಿ ಅವರ ಸಂಬAಧಿಕರಾಗಿದ್ದಾರೆ. ಇವರ ನಿಧನಕ್ಕೆ ಪೊನ್ನಂಪೇಟೆ ಚೇಂಬರ್ ಆಫ್ ಕಾಮರ್ಸ್ ಸಂತಾಪ ವ್ಯಕ್ತಪಡಿಸಿದೆ.