ವೀರಾಜಪೇಟೆ, ಮಾ. ೧೩ : ಈ ಜಗತ್ತಿನಲ್ಲಿರುವ ಎಲ್ಲ ಗಿಡಮೂಲಿಕೆಗಳಲ್ಲಿಯೂ ಔಷಧೀಯ ಗುಣಗಳಿವೆ, ಆದರೆ ಅವುಗಳನ್ನು ಗುರುತಿಸಿ ಬಳಸಿದಾಗ ಮಾತ್ರ ಅವು ಪ್ರಯೋಜನಕ್ಕೆ ಬರುತ್ತವೆ ಎಂದು ಡಾ. ನಡಿಬೈಲು ಉದಯಶಂಕರ್ ಅವರು ತಿಳಿಸಿದರು. ಅವರು ಅರಮೇರಿ ಕಳಂಚೇರಿ ಮಠದ ೨೦೮ನೆಯ ಹೊಂಗಿರಣ ತತ್ತ÷್ವ ಚಿಂತನಾಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ತಮ್ಮ ಅನುಭವಗಳನ್ನು ವಿವರಿಸಿದರು. ಮುಖ್ಯ ಉಪನ್ಯಾಸಕರಾಗಿ ಗುಹ್ಯದ ಬಿ ಆರ್ ರಾಮಚಂದ್ರರಾವ್ ಮಾತನಾಡಿ, ಗಿಡಮೂಲಿಕೆಗಳ ಪ್ರಾತ್ಯಕ್ಷಿಕೆಯ ಮೂಲಕ ವಿವಿಧ ವ್ಯಾದಿಗಳಿಗೆ ಬಳಸಬೇಕಾಗುವ ಗಿಡಮೂಲಿಕೆಗಳನ್ನು ವಿವರಿಸಿದರು. ಮಠದ ಮಲ್ಲಿಕಾರ್ಜುನ ಸ್ವಾಮೀಜಿಯವರು ನಶಿಸಿಹೋಗುತ್ತಿರುವ ಭಾರತದ ಅತಿ ಶ್ರೀಮಂತ ವೈದಕೀಯ ಗಿಡಮೂಲಿಕೆಗಳ ಉಪಚಾರಗಳನ್ನು ಹೆಚ್ಚು ಪ್ರಚಾರಗೊಳಿಸುವ ಮೂಲಕ ಅವುಗಳನ್ನು ಮುಂದಿನ ಪೀಳಿಗೆಗಳಿಗೂ ವರ್ಗಾಯಿಸುವ ಅಗತ್ಯವಿದೆಯೆಂದು ಅಭಿಪ್ರಾಯಪಟ್ಟರು. ಮಠದ ವಿದ್ಯಾರ್ಥಿಗಳು ಸಭಿಕರನ್ನು ಸ್ವಾಗತಿಸಿ, ವಂದಿಸಿದರು.