ಸೋಮವಾರಪೇಟೆ, ಮಾ. ೧೪: ನೆರೆಯ ಹಾಸನ ಜಿಲ್ಲೆಯ ತಿಪಟೂರು ರಸ್ತೆಯಲ್ಲಿ ನಡೆದ ಸ್ಕೂಟರ್ ಹಾಗೂ ಟ್ಯಾಂಕರ್ ನಡುವಿನ ಅವಘಡದಲ್ಲಿ ಸೋಮವಾರ ಪೇಟೆ ಸಮೀಪದ ಬೆಟ್ಟದಕೊಪ್ಪ ಗ್ರಾಮದ ಯುವಕನೋರ್ವ
ಹಾಸನದಲ್ಲಿ ಸ್ಕೂಟರ್-ಟ್ಯಾಂಕರ್ ನಡುವೆ ಅವಘಡ
(ಮೊದಲ ಪುಟದಿಂದ) ದುರ್ಮರಣಕ್ಕೀಡಾಗಿರುವ ಘಟನೆ ನಸುಕಿನ ಜಾವ ೩ ಗಂಟೆ ಸುಮಾರಿಗೆ ಸಂಭವಿಸಿದೆ. ಬೆಟ್ಟದಕೊಪ್ಪ ಗ್ರಾಮದ ರಮೇಶ್ ಹಾಗೂ ಲೀಲಾವತಿ ದಂಪತಿ ಪುತ್ರ ಮನೋಹರ್ (೩೬) ಎಂಬವರೇ ಸಾವನ್ನಪ್ಪಿದವರು.
ನಿನ್ನೆ ಮನೆಗೆ ಅಗಮಿಸಿ ವಾಪಸ್ ಹಾಸನ ಮುಖಾಂತರ ತಿಪಟೂರಿಗೆ ತೆರಳುತ್ತಿದ್ದ ಸಂದರ್ಭ, ಹಾಸನದಿಂದ ೧೫ ಕಿ.ಮೀ. ಅಂತರದಲ್ಲಿ ಘಟನೆ ಸಂಭವಿಸಿದೆ. ಅಪಘಾತಕ್ಕೀಡಾದ ಮನೋಹರ್ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ತಿಪಟೂರಿನ ಹರ್ಷಿತಾ ಅವರನ್ನು ವಿವಾಹವಾಗಿದ್ದ ಮನೋಹರ್, ನಂತರ ಅಲ್ಲಿಯೇ ಖಾಸಗಿ ಸಂಸ್ಥೆಯೊAದರಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ದಿನ ಮನೆಗೆ ಆಗಮಿಸಿ ವಾಪಸ್ ತೆರಳುವ ಸಂದರ್ಭ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮೃತ ಮನೋಹರ್ ಪತ್ನಿ, ೪ ವರ್ಷ ಪ್ರಾಯದ ಮಗಳು ಹಾಗೂ ಒಂದೂವರೆ ವರ್ಷದ ಮಗನನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಇಂದು ಸ್ವಗ್ರಾಮದಲ್ಲಿ ನಡೆಯಿತು.