ಗೋಣಿಕೊಪ್ಪ ವರದಿ, ಮಾ. ೧೪: ಮಹಿಳಾ ದಿನಾಚರಣೆ ಅಂಗವಾಗಿ ಬುಧವಾರ ಲೋಪಮುದ್ರ ಮೆಡಿಕಲ್ ಸೆಂಟರ್ ಮೂಲಕ ಹಿರಿಯ ವೈದ್ಯರು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.

ಜಿಲ್ಲೆಯ ವಿವಿಧೆಡೆೆ ಕಾರ್ಯನಿರ್ವಹಿಸಿರುವ ಹಿರಿಯ ಪ್ರಸೂತಿ ತಜ್ಞರಾದ ಡಾ. ಪಾರುವಂಗಡ ಗೌರಮ್ಮ, ಡಾ. ಫಾತಿಮಾ ಕಾರ್ಯಪ್ಪ ಹಾಗೂ ಹಾತೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಸ್ಮಾ ಜಬೀನ್ ಸನ್ಮಾನ ಸ್ವೀಕರಿಸಿದರು. ಪಿಡಿಓ ಉಸ್ಮಾ ಜಬೀನ್ ಮಾತನಾಡಿ, ಸರ್ಕಾರ ಕೂಡ ಮಹಿಳೆಯರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಮಕ್ಕಳು, ಹಿರಿಯ, ಕಿರಿಯ ಮಹಿಳೆಯರಿಗೆ ದೊರೆಯಬೇಕಾದ ಸೌಲಭ್ಯ ನೀಡುತ್ತಿದೆ. ಇದರ ಸದುಪಯೋಗ ಪಡೆಸಿಕೊಳ್ಳಬೇಕಿದೆ ಎಂದರು. ಲೋಪಮುದ್ರ ಮೆಡಿಕಲ್ ಸೆಂಟರ್ ಮುಖ್ಯಸ್ಥ ಕ್ಯಾ. ಮುಕ್ಕಾಟೀರ ಎ. ಮಾದಪ್ಪ, ವೈದ್ಯರಾದ ಡಾ. ಅಮೃತ್ ನಾಣಯ್ಯ, ಡಾ. ಸೌಮ್ಯ ಗಣೇಶ್ ನಾಣಯ್ಯ, ಡಾ. ಸೋನಿಯಾ ಮಂದಪ್ಪ, ಡಾ. ತೃಪ್ತಿ ಉತ್ತಪ್ಪ, ಡಾ. ರುತ್ ಅಧಲ್ಕ ಇದ್ದರು.