ಕೊಡ್ಲಿಪೇಟೆ, ಮಾ. ೧೩: ಸೋಮವಾರಪೇಟೆ ತಾಲೂಕು ಕೇಂದ್ರದಿAದ ಜಿಲ್ಲೆಯ ಗಡಿಭಾಗವಾದ ಕೊಡ್ಲಿಪೇಟೆ ಮೂಲಕ ರಾಜಧಾನಿ ಬೆಂಗಳೂರಿಗೆ ಪ್ರತಿ ದಿನ ಸಂಜೆ ಕೆ.ಎಸ್.ಆರ್.ಟಿ.ಸಿ.ಯ ನೂತನ ಬಸ್ ಸೇವೆ ಪ್ರಾರಂಭ ಗೊಂಡಿದೆ. ಮ್ಯೆಸೂರು ವಿಭಾಗದ ಕೆ.ಆರ್.ನಗರ ಡಿಪೋಕ್ಕೆ ಸೇರಿದ ಬಸ್ ಪ್ರತಿದಿನ ಸಂಜೆ ೬ ಗಂಟೆಗೆ ಸೋಮವಾರಪೇಟೆಯಿಂದ ಹೊರಟು ಶನಿವಾರಸಂತೆ ಮೂಲಕ ಕೊಡ್ಲಿಪೇಟೆಗೆ ೬.೫೦ ಕ್ಕೆ ತಲುಪಿ ಇಲ್ಲಿಂದ ೭ ಗಂಟೆಗೆ ಹೊರಟು ಅರಕಲಗೂಡು, ಹೊಳೆನರಸೀಪುರ, ಚನ್ನರಾಯಪಟ್ಟಣ, ಕುಣಿಗಲ್ ಮಾರ್ಗವಾಗಿ ರಾತ್ರಿ ೧೧.೪೫ ಕ್ಕೆ ಬೆಂಗಳೂರು ತಲುಪಲಿದೆ.
ನಂತರ ಮಂಡ್ಯ-ಮ್ಯೆಸೂರು ಮೂಲಕ ಕೆ.ಆರ್ ನಗರಕ್ಕೆ ತೆರಳಿ ಮಾರನೇ ದಿನ ಸೋಮವಾರಪೇಟೆಗೆ ಆಗಮಿಸಲಿದೆ. ನೂತನ ಬಸ್ ಕೊಡ್ಲಿಪೇಟೆಗೆ ಆಗಮಿಸಿದ ಸಂದರ್ಭ ವಿವಿಧ ಸಂಘಸAಸ್ಥೆಗಳ ಪ್ರಮುಖರು, ವರ್ತಕರು ಬಸವೇಶ್ವರ ವೃತ್ತದಲ್ಲಿ ಪೂಜೆ ಸಲ್ಲಿಸಿ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಮಾಲಾರ್ಪಣೆ ಮಾಡಿ ಶುಭ ಕೋರಿದರು. ಈ ಸಂದರ್ಭ ವರ್ತಕ ಶಿವರಾಜ್, ಕೊಡ್ಲಿಪೇಟೆ ಗ್ರಾ.ಪಂ. ಪಿಡಿಓ ಹೂವಯ್ಯ, ಬ್ಯಾಡಗೊಟ್ಟ ಗ್ರಾ.ಪಂ. ಸದಸ್ಯ ಹನೀಫ್, ಆಟೋ ಚಾಲಕರ ಸಂಘದ ಪ್ರಮುಖ ಜಗದೀಶ್, ನಜೀರ್ ಅಹ್ಮದ್, ಸುರೇಶ್ ಮಹಡಿಮನೆ, ಕೆ.ಆರ್. ಸಾಗರ್, ಬಿ.ಕೆ. ಶಿವಣ್ಣ ಮಾಸ್ಟರ್, ರುದ್ರಪ್ಪ ಮಾಸ್ಟರ್ ಸೇರಿದಂತೆ ಆಟೋಚಾಲಕರು, ವರ್ತಕರು, ಸಾರ್ವಜನಿಕರು ಉಪಸ್ಥಿತರಿದ್ದರು.