ಮಡಿಕೇರಿ, ಮಾ. ೧೩: ಮೇಕೇರಿಯ ಸ್ವಾಗತ ಯುವಕ ಸಂಘದ ಸಭೆಯು ಇತ್ತೀಚೆಗೆ ಶ್ರೀ ಗೌರಿಶಂಕರ ದೇವಾಲ ಯದ ಸಭಾಂಗಣದಲ್ಲಿ ನಡೆಯಿತು. ಮುಂದಿನ ದಿನಗಳಲ್ಲಿ ವರ್ಷಕ್ಕೆ ಕನಿಷ್ಟ ೬ ಕಾರ್ಯಕ್ರಮಗಳನ್ನು ಯೋಜನಾಬದ್ಧವಾಗಿ ನಡೆಸಲು ಸಭೆ ತೀರ್ಮಾನಿಸಿತು. ನಂತರ ಸ್ವಾಗತ ಯುವಕ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಟಿ.ಎನ್. ಉಮೇಶ್, ಉಪಾಧ್ಯಕ್ಷರಾಗಿ ದೀಪಕ್ ಸಿಂಗ್, ಕಾರ್ಯದರ್ಶಿಯಾಗಿ ಪವನ್ ಕುಮಾರ್, ಸಹ ಕಾರ್ಯದರ್ಶಿಯಾಗಿ ಕೆ.ಎಸ್. ರಾಜೇಶ್, ಖಜಾಂಚಿಯಾಗಿ ಭವನ್ ಕುಮಾರ್, ಸಹ ಖಜಾಂಚಿಯಾಗಿ ಅರ್ಪಿತ್ ಅವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನಿಕಟಪೂರ್ವ ಅಧ್ಯಕ್ಷರಾದ ವಿಜು ಹರೀಶ್ ಹಾಗೂ ನಿಕಟಪೂರ್ವ ಖಜಾಂಚಿ ಬಿ.ಎಸ್. ಅಶೋಕ್ ಸೇರಿದಂತೆ ಯುವಕ ಸಂಘದ ಸದಸ್ಯರುಗಳು ಹಾಜರಿದ್ದರು.