ಮಡಿಕೇರಿ, ಮಾ. ೧೩: ಪೊದೆಯೊಳಗೆ ಸಿಲುಕಿದ ಹಾವನ್ನು ಉರಗ ರಕ್ಷಕ ಸುರೇಶ್ ಪೂಜಾರಿ ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಕಕ್ಕಟ್ಟಕಾಡು ಗ್ರಾಮದ ಹನೀಫ್ ಎಂಬವರ ಮನೆಯ ಅಂಗಳದ ಪೊದೆಯಲ್ಲಿ ಹಾವು ಕಂಡು ಬಂದಿದೆ. ಗಾಬರಿಗೊಂಡ ಮನೆಯವರು ಕೂಡಲೇ ಗುಹ್ಯ ಗ್ರಾಮದ ಉರಗ ರಕ್ಷಕ ಸುರೇಶ್ ಪೂಜಾರಿ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ನಾಗರಹಾವು ಪೊದೆಯೊಳೆಗೆ ಕಂಡು ಬಂದಿದೆ. ಕೇರೇ ಹಾವನ್ನು ತಿನ್ನಲು ಪ್ರಯತ್ನಿಸುತ್ತಿರುವ ನಾಗರಹಾವನ್ನು ರಕ್ಷಿಸಿ ಮಾಲ್ದಾರೆ ಅರಣ್ಯಕ್ಕೆ ಬಿಡಲಾಯಿತು ಎಂದು ಸುರೇಶ್ ಪೂಜಾರಿ ಮಾಹಿತಿ ನೀಡಿದ್ದಾರೆ.