(ಕೋವರ್‌ಕೊಲ್ಲಿ ಇಂದ್ರೇಶ್)

ನವದೆಹಲಿ, ಮಾ. ೧೩: ಕಳೆದ ೩ ವರ್ಷಗಳಲ್ಲಿ ಭೀಕರ ಭೂಕುಸಿತ ದಿಂದಾಗಿ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಹಲವಾರು ಜನರು ಪ್ರಾಣ ಕಳೆದು ಕೊಂಡಿದ್ದಾರೆ. ನೂರಾರು ಜನರು ಮನೆ ಮಠ ಕಳೆದುಕೊಂಡಿದ್ದಾರೆ. ಮಳೆಗಾಲ ಬಂತೆAದರೆ ಇಂದಿಗೂ ಕಡಿದಾದ ಗುಡ್ಡ ಪ್ರದೇಶಗಳ ನಿವಾಸಿಗಳು ಭಯದಿಂದಲೇ ಬದುಕಬೇಕಾದ ಪರಿಸ್ಥಿತಿ ಇದೆ.

ಈ ನಡುವೆ ಇನ್ನೊಂದು ಆಘಾತಕಾರಿ ಸುದ್ದಿಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನೀಡಿದೆ. ಕರ್ನಾಟಕದ ಕೊಡಗು, ಹಾಸನ, ದಕ್ಷಿಣ ಕನ್ನಡ ಸೇರಿದಂತೆ ದೇಶದಲ್ಲಿರುವ ಭೂಕುಸಿತದ ೧೪೭ ಸೂಕ್ಷö್ಮ ಜಿಲ್ಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಉತ್ತರಾಖಂಡದ ಎರಡು ಜಿಲ್ಲೆಗಳು ಅಗ್ರಸ್ಥಾನದಲ್ಲಿದ್ದರೆ, ಕೊಡಗು ೧೨ನೇ ಸ್ಥಾನದಲ್ಲಿದೆ. ನಂತರದಲ್ಲಿ ಹಾಸನ ಜಿಲ್ಲೆ - ೫೩, ದಕ್ಷಿಣ ಕನ್ನಡ ಜಿಲ್ಲೆ - ೫೪, ಉಡುಪಿ ಜಿಲ್ಲೆ - ೭೭, ಚಿಕ್ಕಮಗಳೂರು ಜಿಲ್ಲೆ - ೯೨, ಶಿವಮೊಗ್ಗ ಜಿಲ್ಲೆ - ೧೦೩, ಉತ್ತರ ಕನ್ನಡ ಜಿಲ್ಲೆ - ೧೧೬ ಹಾಗೂ ಹಾವೇರಿ ಜಿಲ್ಲೆ - ೧೨೪ನೇ ಸ್ಥಾನದಲ್ಲಿದೆ ಎಂದು ಉಲ್ಲೇಖಿಸಲಾಗಿದೆ.

ಇಸ್ರೋದ ರಾಷ್ಟಿçÃಯ ದೂರಸಂವೇದಿ ಕೇಂದ್ರ (ಓಚಿಣioಟಿಚಿಟ ಖemoಣe Seಟಿsiಟಿg ಅeಟಿಣಡಿe – ಓಖSಅ)ವು ಭೂಕುಸಿತದ ನಕ್ಷೆಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ೧೭ ರಾಜ್ಯಗಳಲ್ಲಿ ಭೂಕುಸಿತ ಪೀಡಿತ ಪ್ರದೇಶಗಳು ಮತ್ತು ಹಿಮಾಲಯ ಮತ್ತು ಪಶ್ಚಿಮ ಘಟ್ಟಗಳ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಪಟ್ಟಿ ಮಾಡಲಾಗಿದೆ. ಕರ್ನಾಟಕದ ಎಂಟು ಜಿಲ್ಲೆಗಳು ಕೂಡ ಭೂಕುಸಿತ ಭೀತಿ ಪ್ರದೇಶಗಳನ್ನು ಒಳಗೊಂಡಿವೆ.

ಇಸ್ರೋ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ದೇಶದ ೧೪೭ ಸೂಕ್ಷö್ಮ ಜಿಲ್ಲೆಗಳ ಪೈಕಿ ಉತ್ತರಾಖಂಡದ ಎರಡು ಜಿಲ್ಲೆಗಳು ಅಪಾಯದ ಪ್ರದೇಶದ ಅಗ್ರಸ್ಥಾನದಲ್ಲಿವೆ. ಈ ಹಿಂದೆ ಕಾರ್ಟೊಸ್ಯಾಟ್ - ೨ಎಸ್ ಉಪಗ್ರಹದ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾಗ ಜೋಶಿಮಠ ನಗರದ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಇತ್ತೀಚಿನ

(ಮೊದಲ ಪುಟದಿಂದ) ಇಸ್ರೋ ಸಮೀಕ್ಷೆಯ ಪ್ರಕಾರ, ರುದ್ರಪ್ರಯಾಗ ಮತ್ತು ತೆಹ್ರಿ ಜಿಲ್ಲೆಗಳು ಉತ್ತರಾಖಂಡದಲ್ಲಿ ಮಾತ್ರವಲ್ಲದೇ ಇಡೀ ಭಾರತದಲ್ಲೇ ಭೂಕುಸಿತದ ಅಪಾಯದಲ್ಲಿವೆ.

ರುದ್ರಪ್ರಯಾಗ ಜಿಲ್ಲೆ ಕೇದಾರನಾಥ ಮತ್ತು ಬದರಿನಾಥ ಧಾಮಕ್ಕೆ ಹೆಬ್ಬಾಗಿಲು ಆಗಿದೆ. ಇದರೊಂದಿಗೆ ರುದ್ರಪ್ರಯಾಗ ಜಿಲ್ಲೆ ಭಾರತದಲ್ಲಿ ಅತಿ ಹೆಚ್ಚು ಭೂಕುಸಿತ ಸಾಂದ್ರತೆಯನ್ನು ಹೊಂದಿದೆ. ಇದು ಅತ್ಯಧಿಕ ಒಟ್ಟು ಜನಸಂಖ್ಯೆ, ದುಡಿಯುವ ಜನಸಂಖ್ಯೆ, ಸಾಕ್ಷರತೆ ಮತ್ತು ಮನೆಗಳ ಸಂಖ್ಯೆಯನ್ನು ಹೊಂದಿದೆ. ಇದೀಗ ಇಸ್ರೋ ವಿಜ್ಞಾನಿಗಳು ೧೭ ರಾಜ್ಯಗಳ ೧೪೭ ಜಿಲ್ಲೆಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ೧೯೮೮ ಮತ್ತು ೨೦೨೨ರ ನಡುವೆ ದಾಖಲಾದ ೮೦,೯೩೩ ಭೂ ಕುಸಿತಗಳ ಆಧಾರದ ಮೇಲೆ ಭೂಕುಸಿತದ ಅಪಾಯದಲ್ಲಿರುವ ಪ್ರದೇಶಗಳ ಮೌಲ್ಯಮಾಪನ ಕೈಗೊಂಡಿದ್ದಾರೆ.

ಉತ್ತರಾಖAಡ ನಂತರದಲ್ಲಿ ಕೇರಳ, ಜಮ್ಮು ಮತ್ತು ಕಾಶ್ಮೀರ, ಸಿಕ್ಕಿಂ ಹಾಗೂ ಮಣಿಪುರದ ಜಿಲ್ಲೆಗಳ ಈ ಭೂ ಕುಸಿತದ ಅಪಾಯದ ಪಟ್ಟಿಯಲ್ಲಿವೆ. ಇದರ ಬಳಿಕ ಕರ್ನಾಟಕ ಕೂಡ ಇಂತಹ ಅಪಾಯ ಎದುರಿಸುತ್ತಿದೆ ಎಂದು ಇಸ್ರೋ ಭೂಕುಸಿತದ ನಕ್ಷೆಗಳ ಅಟ್ಲಾಸ್ ಬಹಿರಂಗಪಡಿಸಿದೆ.

ಇಸ್ರೋದ ರಾಷ್ಟಿçÃಯ ದೂರಸಂವೇದಿ ಕೇಂದ್ರದ ವಿಜ್ಞಾನಿಗಳು ಮೊದಲ ಬಾರಿಗೆ ೧೪೭ ಜಿಲ್ಲೆಗಳಲ್ಲಿ ೧೯೮೮ ಮತ್ತು ೨೦೨೨ರ ನಡುವೆ ದಾಖಲಾದ ಭೂಕುಸಿತಗಳ ಆಧಾರದ ಮೇಲೆ ಈ ಅಧ್ಯಯನ ಮಾಡುತ್ತಿದ್ದಾರೆ. ಈ ಭೂಕುಸಿತ ಅಪಾಯದ ವಿಶ್ಲೇಷಣೆಯು ಮಾನವ ಹಾಗೂ ಜಾನುವಾರುಗಳ ಜನಸಂಖ್ಯಾ ಸಾಂದ್ರತೆಯನ್ನು ಆಧರಿಸಿದ್ದು, ಇದು ಜನರ ಮೇಲೆ ಬೀರುವ ಪರಿಣಾಮವನ್ನು ಸೂಚಿಸುವುದರೊಂದಿಗೆ ದೇಶದಲ್ಲಿ ಹೆಚ್ಚು ಭೂ ಕುಸಿತದ ದುರ್ಬಲ ಸ್ಥಳಗಳನ್ನು ಪಟ್ಟಿ ಮಾಡಲಾಗಿದೆ.