ಕರಿಕೆ, ಮಾ. ೧೪: ಮಡಿಕೇರಿ ವಿಭಾಗದ ಸೋಮವಾರಪೇಟೆ ವಲಯದ ಕುಂಬೂರು ಗ್ರಾಮದ ದೇವರ ಕಾಡಿನಲ್ಲಿ ಲೋಡ್ಗಟ್ಟಲೆ ಕಸ ಸುರಿದಿರುವ ಘಟನೆಗೆ ಸಂಬAಧಿಸಿದAತೆ ‘ಶಕ್ತಿ’ ವರದಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ತ್ಯಾಜ್ಯ ತೆರವು ಮಾಡಿ ಶುಚಿಗೊಳಿಸಿದೆ. ಮಾದಾಪುರ ಸಮೀಪದ ಕುಂಬೂರಿನ ದೇವರಕಾಡಿನಲ್ಲಿ ಲೋಡ್ಗಟ್ಟಲೆ ಕಸ ಸುರಿದಿರುವ ಬಗ್ಗೆ ‘ಶಕ್ತಿ’ ಚಿತ್ರ ಸಮೇತ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಇಲಾಖೆ ಸಿಬ್ಬಂದಿಗಳು ಪ್ಲಾಸ್ಟಿಕ್ ತ್ಯಾಜ್ಯ ಸೇರಿದಂತೆ ಕಸವನ್ನು ತೆರವುಗೊಳಿಸಿದ್ದಾರೆ.