ವೀರಾಜಪೇಟೆ, ಮಾ. ೧೪: ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಣಗೇರಿ ತಲಗಟಕೇರಿ ಗ್ರಾಮದಲ್ಲಿ ಸರ್ಕಾರದಿಂದ ನಿರೀಕ್ಷಿಸಿದ ಮಟ್ಟದಲ್ಲಿ ಅಭಿವೃದ್ಧಿ ಆಗದ ಕಾರಣ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಊರಿನ ಮಹಾಸಭೆಯಲ್ಲಿ ತೀರ್ಮಾನ ಕ್ಯೆಗೊಳ್ಳಲಾಗಿದೆ ಎಂದು ಊರಿನ ಅಧ್ಯಕ್ಷ ಪುಗ್ಗೆರ ವಿಜು ನಂಜುAಡ ತಿಳಿಸಿದ್ದಾರೆ.
ಲಿಖಿತ ಹೇಳಿಕೆ ನೀಡಿರುವ ಅವರು, ಈ ಗ್ರಾಮದಲ್ಲಿ ೩೦೦ ಜನಸಂಖ್ಯೆ ಹೊಂದಿದೆ. ೨೦೦ಕ್ಕೂ ಅಧಿಕ ಮತದಾರರಿದ್ದಾರೆ. ಕಳೆದ ೨ ವರ್ಷದಿಂದ ಯಾವುದೇ ಅಭಿವೃದ್ದಿ ಕಾರ್ಯ ನಡೆಸಿಲ್ಲ. ಗ್ರಾಮದ ಪ್ರಮುಖ ಎರಡು ರಸ್ತೆ, ಒಂದು ತಡೆಗೋಡೆ, ಹಳೆ ಕಟ್ಟಡ ನವೀಕರಣಕ್ಕೆ ಸರ್ಕಾರದಿಂದ ಅನುದಾನ ಕೋರಿ ಶಾಸಕರು ಸೇರಿದಂತೆ ಹಲವಾರು ಇಲಾಖೆಗಳಿಗೆ ಅರ್ಜಿ ಸಲ್ಲಿಸಲಾಗಿದೆಯಾದರೂ ಯಾವುದಕ್ಕೂ ಮನ್ನಣೆ ದೊರೆತ್ತಿಲ್ಲ. ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆೆ ಅಡಿಯಲ್ಲಿ ನೀರಿನ ಸಂಪರ್ಕಕ್ಕೆ ಪೈಪ್ಲೈನ್ ಅಳವಡಿಸಲಾಗಿದೆ. ಆದರೆ ಸಂಪರ್ಕ ನೀಡಿಲ್ಲ. ಕಳೆದ ೧೦ ದಿನಗಳ ಹಿಂದೆ ಪುಗ್ಗೆರ ಮಂಜು ಅವರ ಮನೆಗೆ ತೆರಳುವ ರಸ್ತೆಗೆ ಡಾಂಬರು ಹಾಕಲಾಗಿದೆ. ಚುನಾವಣೆ ಬಹಿಷ್ಕಾರ ಗ್ರಾಮದ ಸರ್ವ ಸದಸ್ಯರ ತೀರ್ಮಾನವಾಗಿದೆ ಎಂದು ಅವರು ಹೇಳಿದ್ದಾರೆ.