ವೀರಾಜಪೇಟೆ, ಮಾ. ೧೩: ಕೈವಾರ ತಾತಯ್ಯ ನವರ ೨೯೭ ನೇ ಜಯಂತಿಯನ್ನು ಗುರುವಾರ ವೀರಾಜಪೇಟೆಯ ವಿದ್ಯಾನಗರದಲ್ಲಿ ತಾತಯ್ಯ ಅವರ ಭಾವಚಿತ್ರಕ್ಕೆ ಬಲಿಜ ಜನಾಂಗದವರು ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾಗಿ ಆಚರಿಸಿದರು. ಈ ಸಂದರ್ಭ ಮಾತನಾಡಿದ ಜನಾಂಗದ ಮುಖಂಡ ಯೋಗೆಶ್ ನಾಯ್ಡು ಮಾತನಾಡಿ ಜಿಲ್ಲೆಯಲ್ಲಿ ಅನೇಕ ತಲೆಮಾರುಗಳಿಂದÀ ಬಲಿಜ ಜನಾಂಗದವರು ನೆಲೆಸಿದ್ದಾರೆ. ಜಿಲ್ಲೆಯ ಯಾವುದಾದರೊಂದು ಭಾಗದಲ್ಲಿ ಶ್ರೀ ಕೈವಾರ ತಾತಯ್ಯನವರ ಪ್ರತಿಮೆ ನಿರ್ಮಾಣ ಮಾಡಬೇಕು ಅಲ್ಲದೆ ವೀರಾಜಪೇಟೆಯ ಯಾವುದಾದರೂ ಬಡಾವಣೆಗೆ ತಾತಯ್ಯ ಅವರ ಹೆಸರನ್ನು ಇಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡುವುದಾಗಿ ಹೇಳಿದರು. ಈ ಸಂದರ್ಭ ಜನಾಂಗದ ಅಪ್ಪಣ್ಣ, ಗಣೇಶ್, ರಂಜನ್, ಚಂದ್ರ, ಮಿತುನ್, ಮೂರ್ತಿ, ಶ್ರೀನಿವಾಸ್, ವಿದ್ಯ, ಲಲಿತ, ಪೂರ್ಣಿಮಾ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.