ನಾಪೋಕ್ಲು, ಮಾ. ೧೪: ಇತಿಹಾಸ ಪ್ರಸಿದ್ಧವಾದ ಕುಂಜಿಲ-ಕಕ್ಕಬ್ಬೆ ಸಮೀಪದ ಕುಂಜಿಲ ಪೈನರಿ ಮಖಾಂ ಉರೂಸ್ ಭಾಗವಾಗಿ ನಡೆಸಲ್ಪಡುವ ಸಾರ್ವಜನಿಕ ಸೌಹಾರ್ದ ಸಮಾವೇಶವು ಸೋಮವಾರ ಕುಂಜಿಲ ಪೈನರಿ ಸ್ವಲಾತ್ ಆಡಿಟೋರಿಯಂನಲ್ಲಿ ನಡೆಯಿತು.

ಉರೂಸ್ ಕಾರ್ಯಕ್ರಮದಲ್ಲಿ ಸಾಮೂಹಿಕ ಝಿಯಾರತ್, ಖತ್ಮುಲ್ ಖುರಾನ್, ಮೌಲೂದ್ ಪಾರಾಯಣ ಹಾಗೂ ಧಾರ್ಮಿಕ ಮತಪ್ರಭಾಷಣ, ಬುರ್ದಾ ಮಜ್ಲಿಸ್, ಸ್ವಲಾತ್ ಹಾಗೂ ಅನ್ನದಾನ ನಡೆಯಿತು. ಜಾತಿ, ಮತ, ಬೇಧವಿಲ್ಲದೆ ನಡೆಯುವ ಸಾರ್ವಜನಿಕ ಸೌಹಾರ್ದ ಸಮಾವೇಶವು ಮಧ್ಯಾಹ್ನ ೨ ಗಂಟೆಗೆ ನಡೆಯಿತು. ಕುಂಜಿಲ ಪೈನರಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಶೌಕತ್ ಮಕ್ಕಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಖತೀಬರಾದ ನಿಝಾರ್ ಅಹ್ಸನಿ ಉಸ್ತಾದ್, ಮುಖ್ಯ ಅತಿಥಿಗಳಾಗಿ ರಶೀದ್ ಝೈನಿ ಕಕ್ಕಿಂಜೆ, ಶಿಹಾಬುದ್ದೀನ್ ತಂಙಳ್ ಕಿಲ್ಲೂರ್, ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹಾಜಿ ಕುಂಜಿಲ, ಉದಿಯಂಡ ಸುಭಾಶ್, ಅಝೀಝ್ ಮಾಸ್ಟರ್, ಅಂಜಪರವAಡ ಕುಶಾಲಪ್ಪ, ಸಂತು ಸುಬ್ರಮಣಿ, ಬಾಚಮಂಡ ರಾಜ ಪೂವಣ್ಣ, ಕಲಿಯಂಡ ಸಂಪನ್ ಅಯ್ಯಪ್ಪ, ಸಹೀದ್ ಪಾಯಡತ್, ಶಾಫಿ ಎಡಪಾಲ, ಉಸ್ಮಾನ್ ಕೊಟ್ಟಮುಡಿ, ಅಬೂಬಕರ್, ಕುಂಜಿಲ ಪೈನರಿ ಮುಸ್ಲಿಂ ಜಮಾಅತ್ ಸಲಹಾ ಸಮಿತಿ ಪದಾಧಿಕಾರಿಗಳು, ಮತ ಪಂಡಿತರು, ಸಾರ್ವಜನಿಕರು ಭಾಗವಹಿಸಿದ್ದರು. -ದುಗ್ಗಳ