ಗೋಣಿಕೊಪ್ಪ ವರದಿ, ಮಾ. ೧೨: ಮಾಯಮುಡಿ ಗ್ರಾಮದ ಕಮಟೆ ಶ್ರೀ ಮಹಾದೇವರ ವಾರ್ಷಿಕೋತ್ಸವ ಬುಧವಾರ ಸಂಪನ್ನಗೊAಡಿತು.

ಬುಧವಾರ ಕೊಡಿಮರ ಇಳಿಸುವ ಕಾರ್ಯ ನಡೆಯಿತು. ಮಂಗಳವಾರ ಮಧ್ಯಾಹ್ನ ಮಹಾಪೂಜೆ, ಸಾಯಂಕಾಲ ದೇವರ ದರ್ಶನ, ಅಭ್ಯಂಜನ ಮತ್ತು ದೇವರ ನೃತ್ಯ ಪ್ರದಕ್ಷಿಣೆ, ವಸಂತ ಪೂಜೆ, ವಿಷ್ಣುಮೂರ್ತಿ ಪೂಜೆ, ಗುಳಿಗ ಪೂಜೆ ನಡೆಯಿತು. ತಾ. ೩ ರಂದು ಕೊಡಿಮರ ನಿಲ್ಲಿಸುವ ಆಚರಣೆಯೊಂದಿಗೆ ಆರಂಭಗೊAಡ ಹಬ್ಬದಲ್ಲಿ ಗಣಪತಿಗೆ ಪಂಚ ಕಜ್ಜಾಯ, ಈಶ್ವರನಿಗೆ ಬಿಲ್ವಪತ್ರಾರ್ಚನೆ, ಈಶ್ವರನಿಗೆ ಕ್ಷೀರಾಭಿಷೇಕ, ಸುಬ್ರಮಣ್ಯನಿಗೆ ಕ್ಷೀರಾಭಿಷೇಕ, ಈಶ್ವರನಿಗೆ ಅಲಂಕಾರ ಪೂಜೆ, ನೆರ್ಪು, ಮಂಗಳಾರತಿ, ಅನ್ನದಾನ, ಸಾಮೂಹಿಕ ಅಲಂಕಾರ, ತೂಚಂಬಲಿ ಪೂಜೆ ಆಚರಣೆಗಳು ಜರುಗಿದವು. ನಾಡಿನ ಭಕ್ತರು ಪಾಲ್ಗೊಂಡು ಮಳೆ, ಬೆಳೆಗೆ ಪ್ರಾರ್ಥಿಸಿದರು. ಗ್ರಾಮದ ಭದ್ರಕಾಳಿ ದೇವಿ ದರ್ಶನ ನೀಡಿ ಭಕ್ತರಿಗೆ ಆಶೀರ್ವಾದ ನೀಡಿತು.