ಕುಶಾಲನಗರ, ಮಾ. ೧೨: ಕುಶಾಲನಗರದ ಶ್ರೀ ಗಣಪತಿ ದೇವಾಲಯಕ್ಕೆ ದಾನಿಯೊಬ್ಬರು ಬೆಳ್ಳಿ ಕವಚ ಅರ್ಪಿಸಿದ್ದಾರೆ. ಬೆಂಗಳೂರಿನ ಎನ್.ಆರ್. ಕಾಲೋನಿ ನಿವಾಸಿ ವೈ. ಆರ್. ಪ್ರತಾಪ ಕುಟುಂಬಸ್ಥರು ಸುಮಾರು ರೂ. ೩ ಲಕ್ಷ ಮೌಲ್ಯದ ಯೋಗ ಗಣಪತಿ ಬೆಳ್ಳಿ ಕವಚವನ್ನು ದೇವಾಲಯದ ಆಡಳಿತ ಮಂಡಳಿಗೆ ನೀಡಿದ್ದಾರೆ.

ಈ ಸಂಬAಧ ವಿಶೇಷ ಹೋಮ ಹವನಗಳನ್ನು ನಡೆಸಿ ದಾನಿಗಳು ಬೆಳ್ಳಿ ಕವಚವನ್ನು ದೇವಾಲಯ ಸಮಿತಿಯ ಅಧ್ಯಕ್ಷ ವಿ.ಎನ್. ವಸಂತಕುಮಾರ್ ಮತ್ತು ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರ ಬಾಬು ಅವರಿಗೆ ಹಸ್ತಾಂತರ ಮಾಡಿದರು. ದೇವಸ್ಥಾನ ಆಡಳಿತ ಮಂಡಳಿಯ ಉಪಾಧ್ಯಕ್ಷ ಎಂ.ಕೆ. ದಿನೇಶ್, ಅರ್ಚಕ ರಾಘವೇಂದ್ರ ಭಟ್, ದಾನಿ ಪ್ರತಾಪ್ ಕುಟುಂಬಸ್ಥರು ಇದ್ದರು.