ಮಡಿಕೇರಿ, ಮಾ. ೧೨: ಮಡಿಕೇರಿ ಮಹದೇವಪೇಟೆಯ ಕಲರ್ ಪ್ಯಾಲೆಟ್ ಆರ್ಟ್ ಗ್ಯಾಲರಿಯಲ್ಲಿ ತಾ.೫ ರಿಂದ ತಾ.೭ರವರೆಗೆ ಮಕ್ಕಳ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿತ್ತು.

ಲಲಿತಕಲಾ ಅಕಾಡಮಿ ಸದಸ್ಯ, ಕಲಾವಿದ ರಾಮ್ ಗೌತಮ್ ಎನ್.ಎಸ್ ಅವರು ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚಿತ್ರಕಲಾ ಶಿಕ್ಷಕ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ ಸುಮಾರು ೧೫೦ ಚಿತ್ರಕಲೆಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.