ಸಿದ್ದಾಪುರ, ಮಾ. ೧೨: ಗೋವಾದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದAತೆ ಕೊಡಗು ಜಿಲ್ಲೆಯ ಆರೋಪಿ ಸೇರಿದಂತೆ ಮೂವರನ್ನು ಗೋವಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿದ್ದಾಪುರ ಹೈಸ್ಕೂಲ್ ಪೈಸಾರಿ ನಿವಾಸಿ ಶಾಜಿ ಸೇರಿದಂತೆ ಕೇರಳ ರಾಜ್ಯದ ಶರೀಫ್, ಶ್ರೀತು ಬಂಧಿತ ಆರೋಪಿಗಳು.

ಗೋವಾ ರಾಜಧಾನಿ ಪಣಜಿಯ ಪೆರನಮ್ ಸೇರಿದಂತೆ ಸುತ್ತಲಿನ ಪ್ರವಾಸಿತಾಣಗಳಲ್ಲಿ, ಜನನಿಬೀಡ ಪ್ರದೇಶದಲ್ಲಿ ಭಾರತೀಯರು ಮತ್ತು ವಿದೇಶಿಯರನ್ನು ಗುರಿಯಾಗಿಸಿ ಅವರು ತಂಗುತಿದ್ದ ಮನೆ, ರೆಸಾರ್ಟ್ ಹಾಗೂ ಇತರೆಡೆಗಳಲ್ಲಿ ಬೀಗ ಮುರಿದು ಮತ್ತು ಕಿಟಕಿ ಹೊಡೆದು ಬೆಲೆಬಾಳುವ ವಸ್ತುಗಳು, ಹಣವನ್ನು ಕಳ್ಳರು ದೋಚುತ್ತಿದ್ದರು. ಈ ಸಂಬAಧ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಪತ್ತೆಗೆ ತಂಡ ರಚಿಸಿ ಪತ್ತೆಗೆ ಮುಂದಾಯಿತು. ಮೂವರನ್ನು ಗೋವಾ ಪೊಲೀಸರು ಬಂಧಿಸಿ ತನಿಖೆಗೆ ಒಳಪಡಿಸಿ ಅವರುಗಳಿಂದ ಅಪಾರ ಪ್ರಮಾಣದ ನಗದು, ಬೆಲೆ ಬಾಳುವ ಕ್ಯಾಮರ, ಲೆನ್ಸ್, ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್, ಲ್ಯಾಪ್‌ಟಾಪ್, ಆಭರಣ ಸೇರಿದಂತೆ ಇನ್ನಿತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಾಥಮಿಕ ತನಿಖೆ ವೇಳೆ ಸುಮಾರು ೧೩ ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.