ವೀರಾಜಪೇಟೆ, ಮಾ. ೧೧: ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ವಾರ್ಷಿಕ ತೆರೆ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.

ವೀರಾಜಪೇಟೆ ನಗರಕ್ಕೆ ಹೊಂದಿಕೊAಡಿರುವ ಮಡಿಕೇರಿ ರಸ್ತೆಯ ಕುಕ್ಲೂರು ಗ್ರಾಮದಲ್ಲಿ ನೆಲೆ ನಿಂತ ಕುಕ್ಲೂರು ಶ್ರೀ ಮುತ್ತಪ್ಪ ದೇವಸ್ಥಾನದ ವಾರ್ಷಿಕ ಮುತ್ತಪ್ಪ ತೆರೆ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಎರಡು ದಿನಗಳ ಕಾಲ ನಡೆಯಿತು. ತಾ. ೮ ರಂದು ಸಂಜೆ ೬ ಗಂಟೆಗೆ ಮುತ್ತಪ್ಪನ್ ವೆಳ್ಳಾಟಂನೊAದಿಗೆ ಆರಂಭವಾದ ತೆರೆ ಮಹೋತ್ಸವವು ಶಾಸ್ತಾಪ್ಪ ವೆಳ್ಳಾಟಂ, ಗುಳಿಗ ವೆಳ್ಳಾಟಂ, ಮಧ್ಯರಾತ್ರಿ ನಡೆದ ಬಸುರಿಮಾಲ ವೆಳ್ಳಾಟಂ ತೆರೆಯು ಮೈಕ್ರೋ ಸ್ಟೇಶನ್‌ನಿಂದ ಮೆರವಣಿಗೆಯೊಂದಿಗೆ ದೇಗುಲಕ್ಕೆ ಆಗಮಿಸಿತು.

ತಾ. ೯ ರಂದು ಮುಂಜಾನೆ ೨ ಗಂಟೆಗೆ ಕರಿಂಗುಟ್ಟಿ ಶಾಸ್ತಪ್ಪನ ವೆಳ್ಳಾಟಂ ವಿಶೇಷ ತೆರೆ ಮಹೋತ್ಸವದೊಂದಿಗೆ ಎರಡನೇ ಹಂತದ ಉತ್ಸವ ಆರಂಭವಾಗಿ ಗುಳಿಗನ ತೆರೆ ಪ್ರಾಥ:ಕಾಲ ಮುತ್ತಪ್ಪನ್ ಮತ್ತು ತಿರುವಪ್ಪನ್ ತೆರೆ, ಶಾಸ್ತಾಪ್ಪನ್ ತೆರೆ ಕರಿಂಗುಟ್ಟಿ ಶಾಸ್ತಾಪ್ಪ ತೆರೆ ಮಧ್ಯಾಹ್ನ ಬಸುರಿಮಾಲ ತೆರೆಯೊಂದಿಗೆ ಉತ್ಸವವು ಅಂತ್ಯಕAಡಿತು. ದೇಗುಲದ ಆಡಳಿತ ಮಂಡಳಿಯಿAದ ಎರಡು ದಿನಗಳ ಕಾಲ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಸೇರಿದಂತೆ ನಗರ ಮತ್ತು ನೆರೆಯ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.