ಮಡಿಕೇರಿ, ಮಾ. ೧೧: ಕೊಡವ ಹಾಕಿ ಅಕಾಡೆಮಿಯ ೨೦೨೨-೨೩ನೇ ಸಾಲಿನ ವಾರ್ಷಿಕ ಮಹಾಸಭೆಯು ತಾ. ೧೩ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ವೀರಾಜಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಲಿದೆ.

ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಉಪಾಧ್ಯಕ್ಷ ಕುಕ್ಕೇರ ಜಯಾ ಚಿಣ್ಣಪ್ಪ ಈ ಬಗ್ಗೆ ಮಾಹಿತಿ ನೀಡಿದರು. ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಸಂತಾಪ ಸೂಚನೆ, ಕಳೆದ ಮಹಾಸಭೆಯ ವರದಿ ಮಂಡನೆ,ಲೆಕ್ಕ ಪತ್ರ ಮಂಡನೆಯೊAದಿಗೆ ಅಪ್ಪಚೆಟ್ಟೋಳಂಡ ಹಾಕಿ ನಮ್ಮೆಗೆ ಬೆಂಬಲ ಸೂಚಿಸುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.ಅಕಾಡೆಮಿಯು ೪೦೬ ಕುಟುಂಬಗಳ ಸದಸ್ಯತ್ವವನ್ನು ಹೊಂದಿದ್ದು ಎಲ್ಲರೂ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ ಅವರು ಹೆಚ್ಚಿನ ಮಾಹಿತಿಗೆ ೯೧೧೦೮೦೮೦೦೯ ದೂರವಾಣಿಯನ್ನು ಸಂಪರ್ಕಿಸಬಹುದು ಎಂದರು.

ಬೆಳ್ಳಿಯ ರೋಲಿಂಗ್ ಟ್ರೋಫಿ

ಅಪ್ಪಚೆಟ್ಟೋಳಂಡ ಹಾಕಿ ನಮ್ಮೆಗೆ ಸರ್ವರ ಸಹಕಾರ ಅಗತ್ಯ ಎಂದು ಹೇಳಿದ ಜಯಾ ಚಿಣ್ಣಪ್ಪ ಕೊಡವ ಹಾಕಿ ಅಕಾಡೆಮಿ ವತಿಯಿಂದ ಈ ಬಾರಿಯ ಹಾಕಿ ನಮ್ಮೆಗೆ ಬೆಳ್ಳಿಯ ರೋಲಿಂಗ್ ಟ್ರೋಫಿ ನೀಡಲಾಗುತ್ತದೆ. ಸತತವಾಗಿ ಮೂರು ಬಾರಿ ಹಾಕಿ ನಮ್ಮೆಯಲ್ಲಿ ಜಯಗಳಿಸುವ ತಂಡ ಈ ರೋಲಿಂಗ್ ಟ್ರೋಫಿಯನ್ನು ಪಡೆದುಕೊಳ್ಳಲಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಅಕಾಡೆಮಿ ನಿರ್ದೇಶಕ ಚೆಯ್ಯಂಡ ಸತ್ಯ, ಕಂಬೀರAಡ ರಾಕಿ ಪೂವಣ್ಣ ಉಪಸ್ಥಿತರಿದ್ದರು.