ಮಡಿಕೇರಿ, ಮಾ. ೧೧: ಮಡಿಕೇರಿ ತಾಲೂಕು ಕನ್ನಂಡ ಪಡೆಬೀರ ವೃತ್ತದ ಬಳಿ ಇರುವ ಬಸ್ ತಂಗುದಾಣದ ಬಳಿಯಲ್ಲಿ ನಿಜಾಮುದ್ದೀನ್ ಎಂಬಾತನು ಅಕ್ರಮವಾಗಿ ಒಂದು ಆನೆಯ ಕಾಲು ಮೂಳೆ, ಮೊಟ್ಟೆ ಆಕಾರದಲ್ಲಿ ಇರುವ ಗಜ ಮುತ್ತುವಿನಂತಿರುವ ಮೂರು ಮೊಟ್ಟೆಯಂತಹ ವಸ್ತುಗಳು, ಒಂದು ಬಿಳಿ ಬಣ್ಣದ ಗಜಮುತ್ತುವಿನಂತೆ ಇರುವ ಒಂದು ಮುತ್ತು ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಪ್ರಯತ್ನಿಸುತ್ತಿರುವಾಗ ಪತ್ತೆ ಮಾಡಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಬಂಧಿಸಲಾಗಿದೆ.