ಚೆಯ್ಯಂಡಾಣೆ, ಮಾ. ೧೨: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ವತಿಯಿಂದ ಆಯೋಜಿಸಿರುವ ೪ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ಮೇ ೨೫ ರಂದು ನಾಪೋಕ್ಲು ಸಮೀಪದ ಚೆರಿಯಪರಂಬು ಶಾದಿ ಮಹಲ್‌ನಲ್ಲಿ ನಡೆಯಲಿದೆ.

ಇದರ ಸ್ವಾಗತ ಸಮಿತಿ ರಚನಾ ಸಭೆಯು ದೇರಾ ದುಬೈ ಕಾಸರಗೋಡು ರೆಸ್ಟೋರೆಂಟ್ ಸಭಾಂಗಣದಲ್ಲಿ ಕೊಡಗು ಸುನ್ನೀ ವೆಲ್ಫೇರ್ ಅಧ್ಯಕ್ಷರಾದ ಉಸ್ಮಾನ್ ಹಾಜಿ ನಾಪೋಕ್ಲು ಅಧ್ಯಕ್ಷತೆಯಲ್ಲಿ ನಡೆಯಿತು. ಕೆಸಿಎಫ್ ಅಂತಾರಾಷ್ಟಿçÃಯ ಸಮಿತಿಯ ಸಂಘಟನಾ ವಿಭಾಗದ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಜಾಮಿ ಎಮ್ಮೆಮಾಡು ಸಭೆಯನ್ನು ಉದ್ಘಾಟಿಸಿದರು.

ಸಭೆಯಲ್ಲಿ ವೆಲ್ಫೇರ್ ನಾ ಜಿಸಿಸಿ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ,ಇಬ್ರಾಹಿಂ ಪೈಝಿ, ಇಸ್ಮಾಯಿಲ್ ಮೂರ್ನಾಡು, ರಿಯಾಜ್ ಕೊಂಡAಗೇರಿ, ಅಹ್ಮದ್ ಚಾಮಿಯಾಲ್, ಮುಝಮ್ಮಿಲ್ ಪಾಲಿಬೆಟ್ಟ ಮತ್ತಿತರರು ಭಾಗವಹಿಸಿದ್ದರು. ನಂತರ ಸ್ವಾಗತ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಅಬೂಬಕ್ಕರ್ ಹಾಜಿ ಕೊಟ್ಟಮುಡಿ, ಕಾರ್ಯಾಧ್ಯಕ್ಷರಾಗಿ ಮುಝಮಿಲ್ ಪಾಲಿಬೆಟ್ಟ, ಕಾರ್ಯಕ್ರಮದ ಸಂಯೋಜಕರಾಗಿ ಇಸ್ಮಾಯಿಲ್ ಮೂರ್ನಾಡು, ಕೋಶಾಧಿಕಾರಿಯಾಗಿ ಅಹ್ಮದ್ ಚಾಮಿಯಾಲ್ ಹಾಗೂ ಸದಸ್ಯರಾಗಿ ಹಮೀದ್ ಚಾಮಿಯಾಲ್, ಹಂಝ ಪೊನ್ನಂಪೇಟೆ, ಆಲಿ ಎಮ್ಮೆಮಾಡು, ಮುಜೀಬ್ ಕಡಂಗ, ರಿಯಾಜ್ ಕೊಂಡAಗೇರಿ, ನಯಾಜ್ ನಾಪೋಕ್ಲು, ಅರಫಾತ್ ನಾಪೋಕ್ಲು ಆಯ್ಕೆ ಆದರು. ಪ್ರಧಾನ ಕಾರ್ಯದರ್ಶಿ ಸಲೀಂ ಗುಂಡಿಗೆರೆ ಸ್ವಾಗತಿಸಿ, ಇಸ್ಮಾಯಿಲ್ ಮೂರ್ನಾಡು ವಂದಿಸಿದರು.