ಕಡಂಗ, ಮಾ. ೧೧: ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಮತ್ತು ಓಯಸಿಸ್ ಸ್ಪೋರ್ಟ್ಸ್ ಕ್ಲಬ್ ಹೊದವಾಡ ಆಶ್ರಯದಲ್ಲಿ ಚೆರಿಯಪರಂಬು ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೧೯ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರೀಡಾಕೂಟದ ಶನಿವಾರದ ಮೊದಲ ಪಂದ್ಯದಲ್ಲಿ ಟಿಎಫ್ಬಿ ಪಡಿಯಾನಿ ತಂಡವನ್ನು ಪ್ಲೇ ಬಾಯ್ಸ್ ಮಾಲ್ದಾರೆ ತಂಡ ಮಣಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು.
೨ನೇ ಪಂದ್ಯದಲ್ಲಿ ಗಾಂಧಿ ಕ್ರಿಕೆಟರ್ಸ್ ಕಂಡಕರೆ ತಂಡವನ್ನು ೪ ಸ್ಟಾರ್ ಎಡಪಾಲ ಮಣಿಸಿತು. ಟೀಮ್ ಘಾಜಿ ವೀರಾಜಪೇಟೆ ತಂಡವು ಕೆಎಂಸಿಸಿ ಕಲ್ಲುಮೊಟ್ಟೆ ತಂಡವನ್ನು ಸೋಲಿಸಿತು.
೪ನೇ ಪಂದ್ಯದಲ್ಲಿ ಐಕಾನ್ ವಾರಿಯರ್ಸ್ ಕಲ್ಲುಬಾಣೆ ತಂಡವನ್ನು ಕೆವೈಸಿಸಿ ಕಡಂಗ ತಂಡ ಮಣಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು.
ಫ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಾಲ್ದಾರೆ ತಂಡವನ್ನು ಮಣಿಸಿ ಕೆವೈಸಿಸಿ ಕಡಂಗ ತಂಡ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿತು.
ತಾ. ೧೨ ರಂದು (ಇಂದು) ಮಧ್ಯಾಹ್ನ ೩ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.