೪ವೀರಾಜಪೇಟೆ, ಮಾ. ೧೨: ವೀರಾಜಪೇಟೆ ಸಮೀಪದ ಮಲೆತಿರಿಕೆ ಬೆಟ್ಟದ ಶ್ರೀ ಮಲೆ ಮಹಾದೇಶ್ವರ ದೇವರ ವಾರ್ಷಿಕ ಹಬ್ಬವು ತಾ. ೧೫ ರಿಂದ ೨೦ ರವರಗೆ ನಡೆಯಲಿದೆ. ತಾ. ೧೮ಕ್ಕೆ ದೊಡ್ಡ ಹಬ್ಬ ನಡೆಯಲಿದೆ ಎಂದು ದೇವಾಲಯ ಟ್ರಸ್ಟ್ ಅಧ್ಯಕ್ಷ ವಾಟೆರೀರ ಪೂವಯ್ಯ ತಿಳಿಸಿದ್ದಾರೆ.
ತಾ. ೧೫ ರಂದು ಸಂಜೆ ನಾಲ್ಕು ಗಂಟೆಗೆ ಕುಂದಿರ ಐನ್ಮನೆಯಿಂದ ಭಂಡಾರ ಬರುವುದು, ಸಂಜೆ ೭ ಗಂಟೆಗೆ ಕೊಡಿಮರ ನಿಲ್ಲಿಸುವುದು, ರಾತ್ರಿ ೮ಕ್ಕೆ ಮಹಾಪೂಜೆ, ತಾ. ೧೬ ರಂದು ಬೆಳಿಗ್ಗೆ ೧೧ಕ್ಕೆ ನಾಗ ದೇವಾಲಯದಲ್ಲಿ ವಿಶೇಷ ಪೂಜೆ ಅಪರಾಹ್ನ ಅನ್ನದಾನ ನಡೆಯಲಿದೆ. ರಾತ್ರಿ ೮ ಗಂಟೆಗೆ ಕಾಪು, ನಂತರ ಮಹಾಪೂಜೆ ಬಳಿಕ ಅನ್ನದಾನ ನಡೆಯಲಿದೆ.
ತಾ. ೧೭ ರಂದು ೧೧ಕ್ಕೆ ಮಕ್ಕಾಟ್ ಸ್ಥಾನದಲ್ಲಿ ವಿಶೇಷ ಪೂಜೆ ಬಳಿಕ ರಾತ್ರಿ ೮ಕ್ಕೆ ಇರ್ ಬೊಳಕ್ ಮಹಾಪೂಜೆ, ತಾ. ೧೮ ರಂದು ದೊಡ್ಡ ಹಬ್ಬ ನಡೆಯಲಿದ್ದು, ಅಪರಾಹ್ನ ೧೨ಕ್ಕೆ ನೆರಪು, ಎತ್ತ್ಪೋರಾಟ, ತೆಂಗಿನ ಕಾಯಿಗೆ ಗುಂಡು ಹೊಡೆಯುವುದು ನಂತರ ಅಪರಾಹ್ನ ೧ ಗಂಟೆಗೆ ಮಹಾಪೂಜೆ, ಅಪರಾಹ್ನ ೩ ಗಂಟೆಗೆ ದೇವರು ಹೊರಗೆ ಬರುವುದು ಬಳಿಕ ಸಂಜೆ ೬ ಗಂಟೆಗೆ ದೇವರ ಮೆರವಣಿಗೆ ವೀರಾಜಪೇಟೆ ಮುಖ್ಯ ರಸ್ತೆಯಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ವೀರಾಜಪೇಟೆ ಜೈನರ ಬೀದಿಯ ಬಸವೇಶ್ವರ ದೇವಾಲಯದಲ್ಲಿ ಪೂಜೆ ನಂತರ ಗಡಿಯಾರ ಕಂಬದ ಬಳಿ ಕೃಷ್ಣ ಸ್ಟೋರ್ ಸಮೀಪ ಪೂಜೆ ನಂತರ ದೇವಾಂಗ ಬೀದಿಯ ಪಾರ್ವತಿ ದೇವಾಲಯದಲ್ಲಿ ಪೂಜೆ ಬಳಿಕ ದೇವರು ಮತ್ತೆ ದೇವಾಲಯಕ್ಕೆ ರಾತ್ರಿ ೧೦ ಗಂಟೆಗೆ ಹಿಂತಿರುಗಲಿದ್ದು ಮಲೆಮಹಾದೇಶ್ವರ ದೇವಾಲಯದಲ್ಲಿ ಪೂಜೆ ನಡೆಯಲಿದೆ.
ತಾ. ೧೯ ರಂದು ಅಪರಾಹ್ನ ೧೨ ಗಂಟೆಗೆ ಮಹಾಪೂಜೆ, ಸಂಜೆ ೬ ಗಂಟೆಗೆ ದೇವರ ಅವಭೃತ ಸ್ನಾನ ನಂತರ ರಾತ್ರಿ ೮ಕ್ಕೆ ದೇವರ ನೃತ್ಯ ನಂತರ ಅನ್ನದಾನ ನಡೆಯಲಿದೆ.
ತಾ. ೨೦ ರಂದು ಬೆಳಿಗ್ಗೆ ೧೧ಕ್ಕೆ ಕೊಡಿಮರ ಇಳಿಸುವುದು (ಕಳಮಡಕವೊ) ಅಪರಾಹ್ನ ೧೨ ಕ್ಕೆ ಮಹಾಪೂಜೆ ನೆರವೇರಲಿದೆ. ಧಾರ್ಮಿಕ ಕೈಂಕರ್ಯದ ದಿನಗಳಂದು ಅಪರಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ಇರಲಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭ ದೇವಾಲಯದ ತಕ್ಕರಾದ ಕೊಳವಂಡ ಕಾರ್ಯಪ್ಪ, ಕಾರ್ಯದರ್ಶಿ ಬೊಳ್ಳಚಂಡ ಪ್ರಕಾಶ್, ಸಹಕಾರ್ಯದರ್ಶಿ ಚೋಕಂಡ ರಮೇಶ್ ಮತ್ತು ಖಜಾಂಚಿ ಚಾರಿಮಂಡ ಗಣಪತಿ ಉಪಸ್ಥಿತರಿದ್ದರು.