ಜಿಲ್ಲಾಧಿಕಾರಿ
ಕುಶಾಲನಗರ, ಮಾ. ೧೧: ಛಾಯಾಗ್ರಾಹಕರು ತೆಗೆಯುವ ಅದ್ಭುತ ಕಲಾವಿದರಾಗಿದ್ದಾರೆ ಎಂದು ಕೊಡಗು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಬುಧವಾರ ನಡೆದ ಛಾಯಾ ಸಮ್ಮಿಲನ ೨೦೨೩ ಕಾರ್ಯಕ್ರಮದ ಕ್ಯಾನನ್ ಕಂಪೆನಿಯ ಆಶ್ರಯದಲ್ಲಿ ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘದ ಆಶಯದಂತೆ ಸಂಘಟನೆಗಾಗಿ ನಿವೇಶನ ಒದಗಿಸುವ ಭರವಸೆ ವ್ಯಕ್ತಪಡಿಸಿದರು. ಪತ್ರಕರ್ತರು ಮತ್ತು ಛಾಯಾಗ್ರಾಹಕರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದ ಜಿಲ್ಲಾಧಿಕಾರಿಗಳು, ಅದರಿಂದ ಈ ಎರಡು ಸಂಘಟನೆಗಳಿಗೆ ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು.
ಛಾಯಾಗ್ರಾಹಕರು ತಂತ್ರಜ್ಞಾನದೊAದಿಗೆ ಸೆಣಸಬೇಕಾದ ಅನಿವಾರ್ಯತೆ ಇದೆ ಎಂದರು. ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಆರ್. ವಸಂತ ಮಾತನಾಡಿ, ಜಿಲ್ಲೆಯ ಛಾಯಾಗ್ರಾಹಕರ ಆರ್ಥಿಕ ಸಂಕಷ್ಟಕ್ಕೆ ಸರ್ಕಾರ ವಿಶೇಷ ಸೌಲಭ್ಯ ಘೋಷಣೆ ಮಾಡಬೇಕು. ಛಾಯಾಗ್ರಾಹಕರ ಅಕಾಡೆಮಿ ಸ್ಥಾಪನೆ ಮಾಡಬೇಕು ಎಂದು ಮನವಿ ಮಾಡಿದರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಫೋಟೋ ಕಲರ್ ಲ್ಯಾಬ್ ಸ್ಟಾಲ್ಗಳು, ಆಲ್ಬಮ್ ಪ್ರಿಂಟಿAಗ್ನ ವಿವಿಧ ಮಾದರಿಗಳನ್ನು ಪ್ರದರ್ಶನ ಮಾಡಲಾಯಿತು. ಕೆನನ್ ಕಂಪೆನಿಯ ಅತ್ಯಾಧುನಿಕ ಕ್ಯಾಮರಾಗಳನ್ನು ಪ್ರದರ್ಶಿಸಿ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಕುಶಾಲನಗರ ತಾಲೂಕು ತಹಶೀಲ್ದಾರ್ ಟಿ.ಎಂ. ಪ್ರಕಾಶ್, ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಸೊಲೊಮನ್ ಡೇವಿಡ್, ಸಹ ಕಾರ್ಯದರ್ಶಿ ರಂಜಿತ್, ಐಪಿಪಿ ಸುರೇಶ್ ಮಾವಟ್ಕರ್, ಖಜಾಂಚಿ ಪ್ರಕಾಶ್, ಮುನೀರ್ ಅಹಮ್ಮದ್, ರೋಷನ್, ಮಾಜಿ ಅಧ್ಯಕ್ಷರಾದ ಗುಡ್ಡೆಮನೆ ವಿಶ್ವ ಕುಮಾರ್, ಮಾಳೇಟಿರ ಲಕ್ಷö್ಮಣ್, ಡಾಡು ಜೋಸೆಫ್ ಇತರರು ಉಪಸ್ಥಿತರಿದ್ದರು.