ಗೋಣಿಕೊಪ್ಪಲು, ಮಾ. ೧೨: ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಿದ ಹಿನೆÀ್ನಲೆಯಲ್ಲಿ ಕಳೆದ ೭ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಅಂಚಿನಲ್ಲಿರುವ ಕೆ. ಬಾಡಗ ಗ್ರಾಮ ಪಂಚಾಯಿತಿಗೆ ಪ್ರಸ್ತುತ ಸಾಲಿನ ಪ್ರತಿಷ್ಠಿತ ಗ್ರಾಮ ಗಾಂಧಿ ಪುರಸ್ಕಾರ ಲಭಿಸಿದೆ. ಕರ್ನಾಟಕ ಸರ್ಕಾರವು ಈ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು ಕೊಡಗು ಜಿಲ್ಲೆಯ ೧೦೮ ಪಂಚಾಯಿತಿಗಳಲ್ಲಿ ೫ ಪಂಚಾಯಿತಿ ಗಳು ಈ ಪ್ರಶಸ್ತಿಗೆ ಭಾಜನವಾಗಿದೆ. ಇದರಲ್ಲಿ ಕೆ. ಬಾಡಗ ಗ್ರಾಮ ಪಂಚಾಯಿತಿಯು ಒಂದಾಗಿದೆ.
೩೫೦೦ಕ್ಕೂ ಅಧಿಕ ಜನಸಂಖ್ಯೆ ಯುಳ್ಳ ಈ ಪಂಚಾಯಿತಿಯಲ್ಲಿ ೨೫೦೦ಕ್ಕೂ ಅಧಿಕ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ವಾಸವಾಗಿದ್ದಾರೆ. ೨೨೮೮ ಹೆಕ್ಟೇರ್ ವಿಸ್ತೀರ್ಣವುಳ್ಳ ಕೆ. ಬಾಡಗ ಗ್ರಾಮ ಪಂಚಾಯಿತಿಯಲ್ಲಿ ನಾಣಚ್ಚಿ ಗದ್ದೆ ಹಾಡಿ, ಚಂದನಕೆರೆ, ಬಾಳೆಕೋವು, ತಿರುನಾಡ ಪೈಸಾರಿ, ಚೂರಿಕಾಡು, ಮುಚ್ಚನಕೊಲ್ಲಿ, ಬೊಳ್ಳೆರ ಗೇಟ್, ಪೂಕಂಡಿ, ತಾಯಿಭೂಮಿ ಪೈಸಾರಿ, ಕೋದಮೂಲೆ, ಹಾಡಿ ಗಳನ್ನು ಹೊಂದಿರುವ ಜನವಸತಿ ಪ್ರದೇಶಗಳಾಗಿವೆ.
೯ ಸದಸ್ಯರಿರುವ ಆಡಳಿತ ಮಂಡಳಿಯಲ್ಲಿ ಪ್ರಸ್ತುತ ಅಧ್ಯಕ್ಷರಾಗಿ ಜೇನುಕುರುಬರ ಆರ್. ಚಂದ್ರ, ಉಪಾಧ್ಯಕ್ಷರಾಗಿ ಚೆಪ್ಪುಡೀರ ರೀಟಾ ವಿಜಯ್, ಕಾರ್ಯನಿರ್ವಹಿಸು ತ್ತಿದ್ದಾರೆ. ೩.೧ ಲಕ್ಷ ಸಂಪನ್ಮೂಲವಿದ್ದ ಈ ಪಂಚಾಯಿತಿಯು ಪ್ರಸ್ತುತ ೮ ಲಕ್ಷ ಆದಾಯವನ್ನು ಗಳಿಸುತ್ತಿದೆ.
ತೆರಿಗೆ ಸಂಗ್ರಹ ಹಾಗೂ ವಸೂಲಾತಿಯಲ್ಲಿ ಶೇ. ೧೦೦ ಸಾಧನೆ ಮಾಡಿದೆ. ಸಂಪನ್ಮೂಲ ಕ್ರೋಢೀಕರಣೆಗೆ ಉತ್ತಮ ಗ್ರಾಮ ಪಂಚಾಯಿತಿ ಎಂಬ ಪ್ರಶಸ್ತಿಯು ಲಭಿಸಿದೆ. ಅಲ್ಲದೆ ಬಿಲ್ ಕಲೆಕ್ಟರ್ ಮಧುಸೂಧನ್ ಅವರಿಗೆ ಪ್ರಶಸ್ತಿ ದೊರೆತಿದೆ.
ಮಹಾತ್ಮಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಅತಿ ಹೆಚ್ಚು ಮಾನವ ದಿನಗಳನ್ನು ಸೃಷ್ಟಿಸುವಲ್ಲಿ ಕೊಡಗು ಜಿಲ್ಲೆಗೆ ೫ನೇ ಸ್ಥಾನ ಪಡೆದಿದ್ದೇವೆ.
ಎನ್ಆರ್ಇಜಿ ಯೋಜನೆ ಪ್ರಾರಂಭವಾದ ನಂತರ ಅತೀ ಹೆಚ್ಚು ಮಾನವ ದಿನ ಸೃಷ್ಟಿ ಮಾಡಿದ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ ಮಾಹಿತಿ ಒದಗಿಸಿದರು.
ಕೋವಿಡ್ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ದಿಂದ ಸ್ವಾತಂತ್ರö್ಯ ದಿನಾಚರಣೆ ಯಂದು ಪಂಚಾಯಿತಿಗೆ ಗೌರವ ಲಭಿಸಿದೆ. ಡಿಜಿಟಲ್ ಗ್ರಂಥಾಲಯಕ್ಕೆ ಒತ್ತು ನೀಡಿರುವ ಪಂಚಾಯಿತಿ ಬಾಡಿಗೆ ಕಟ್ಟಡದಲ್ಲಿ ಗ್ರಂಥಾಲಯ ವನ್ನು ಮುಂದುವರೆಸುತ್ತಿದ್ದು ಇದರ ಮಾಸಿಕ ಬಾಡಿಗೆಯನ್ನು ಪಂಚಾಯಿತಿ ಸದಸ್ಯ ಮುಕ್ಕಾಟಿರ ರಿತೇಶ್ ಬಿದ್ದಪ್ಪ ತಮ್ಮ ಸ್ವಂತ ಹಣದಿಂದ ಇಂದಿಗೂ ನೀಡುತ್ತಿದ್ದಾರೆ. ಸಂಜೀವಿನಿ ಒಕ್ಕೂಟದಿಂದ ತ್ಯಾಜ್ಯ ವಿಲೇವಾರಿ ಘಟಕದ ನಿರ್ವಹಣೆ ಮಾಡ ಲಾಗುತ್ತಿದ್ದು ಮನೆ ಮನೆಗಳಿಂದ ಕಸವನ್ನು ಸಂಗ್ರಹಿಸಲಾಗುತ್ತಿದೆ.
ಎನ್ಆರ್ಇಜಿ ಮೂಲಕ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿರುವ ಪಂಚಾಯಿತಿ ರಸ್ತೆ, ಎರೆಹುಳು ಘಟಕ, ಶಾಲಾ ಉದ್ಯಾನವನ, ಮೈದಾನ ದುರಸ್ತಿ, ಕೊಳವೆ ಬಾವಿ, ಮಳೆನೀರು ಕೊಯ್ಲು, ಸೋಪ್ಪಿಟ್, ರೈತರಿಗೆ ಇಂಗು ಗುಂಡಿಗಳನ್ನು ಮಾಡಿಕೊಳ್ಳಲಾಗಿದೆ. ಸರ್ಕಾರದ ನಿಯಮದಂತೆ ಗ್ರಾಮ ಸಭೆ, ಹಿರಿಯ ನಾಗರಿಕರ ಹಾಗೂ ವಿಶೇಷಚೇತನರ ಗ್ರಾಮಸಭೆ, ಜಿಲ್ಲಾಮಟ್ಟದ ನರೇಗಾ ದಿನಾಚರಣೆ, ನವಭಾರತದ ನಾರಿಶಕ್ತಿ ಕಾರ್ಯಕ್ರಮ, ವಿಶ್ವಜಲ ದಿನಾಚರಣೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಸಪ್ತಾಹ, ಪರಿಶಿಷ್ಟ ಶೇ.೨೫ರ ನಿಧಿಯನ್ನು ಸಮಪರ್ಕವಾಗಿ ಸದ್ಬಳP,ೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಉಚಿತ ನೋಟ್ಬುಕ್ ವಿತರಣೆ, ಕಂಪ್ಯೂಟರ್ ತರಬೇತಿ, ಉಚಿತ ನಲ್ಲಿ ನೀರಿನ ಸಂಪರ್ಕ, ಸೇರಿದಂತೆ ಶೇ. ೫ರ ನಿಧಿಯಲ್ಲಿ ವಿಶೇಷಚೇತನರಿಗೆ ಆರೋಗ್ಯ ಚಿಕಿತ್ಸೆ, ಧನ ಸಹಾಯ ವಿತರಣೆ ಮಾಡಲಾಗಿದೆ. ಶೇ.೨ರ ಕ್ರೀಡಾ ನಿಧಿಯನ್ನು ಸಮರ್ಪಕವಾಗಿ ಬಳಕೆ ಮಾಡಿದೆ.
ಕಾಲಕಾಲಕ್ಕೆ ತಕ್ಕಂತೆ ಮಾಸಿಕ, ವಿಶೇಷ, ಸ್ಥಾಯಿ ಸಮಿತಿ, ನೀರು ನೈರ್ಮಲ್ಯ ಸಮಿತಿ ಹಾಗೂ ತುರ್ತು ಸಭೆಗಳನ್ನು ನಡೆಸಲಾಗಿದೆ. ಪ್ರಮುಖವಾಗಿ ವಾರ್ಡ್ಸಭೆ, ಗ್ರಾಮಸಭೆ ವಿಶೇಷ ಸಭೆ, ಸಾಮಾನ್ಯ ಸಭೆ ಸೇರಿದಂತೆ ಸಾಮಾಜಿಕ ಲೆಕ್ಕ ಪರಿಶೋಧನೆ ಮಾಡುವ ಮೂಲಕ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮುಂದಿನ ವಾರ್ಷಿಕ ಸಾಲಿನಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡುವುದಾಗಿ ಪಂಚಾಯಿತಿ ಸದಸ್ಯ ಮುಕ್ಕಾಟೀರ ರಿತೇಶ್ ಬಿದ್ದಪ್ಪ ಮಾಹಿತಿ ಒದಗಿಸಿದರು. ಸಾರ್ವಜನಿಕರ ಸ್ಪಂದನ, ಮೇಲಾಧಿಕಾರಿಗಳ ಮಾರ್ಗದರ್ಶನ, ವಿವಿಧ ಇಲಾಖೆಯ ಸಹಕಾರ, ಸಿಬ್ಬಂದಿಗಳ ಆಡಳಿತ ಮಂಡಳಿಯ ಜವಾಬ್ದಾರಿಯುತ ಕೆಲಸದಿಂದಾಗಿ ಗ್ರಾಮ ಗಾಂಧಿ ಪುರಸ್ಕಾರ ಲಭಿಸಿದೆ ಎಂದು ಕಾರ್ಯದರ್ಶಿ ಕಳ್ಳಿಚಂಡ ಕೆ. ಪೂಣಚ್ಚ ಮಾಹಿತಿ ಒದಗಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಚೆಪ್ಪುಡಿರ ಬೋಪಣ್ಣ ಸುಖಪ್ರಿಯ, ಲಕ್ಷಿö್ಮ, ಕಾವೇರಿ, ರಾಧ ಹಾಗೂ ರಮೇಶ್ ಈ ವೇಳೆ ಹಾಜರಿದ್ದರು.
- ಹೆಚ್.ಕೆ. ಜಗದೀಶ್