ಮಡಿಕೇರಿ, ಮಾ. ೧೧: ಕೆ.ಪೆರಾಜೆ ಗ್ರಾಮದ ಅಬ್ದುಲ್ ಮೆಹದಿ ಎಂಬವರ ಮನೆಯ ಬಳಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಬೀಟೆ ಮತ್ತು ತೇಗದ ಮರದ ನಾಟಗಳನ್ನು ವಶಪಡಿಸಿ ಸಂಪಾಜೆ ವಲಯದ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ಅÀವರ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ವಿಜೇಂದ್ರ ಕುಮಾರ್ ಎಂ., ಗಸ್ತು ಅರಣ್ಯ ಪಾಲಕ ನಾಗರಾಜ್ ಎಸ್., ಅರಣ್ಯ ವೀಕ್ಷಕರಾದ ಪುರುಷೋತ್ತಮ್. ಬಾಬು. ವಸಂತ್. ಮಾಧವ ಮತ್ತು ವಾಹನ ಚಾಲಕ ಭರತ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.