ಗೋಣಿಕೊಪ್ಪಲು, ಮಾ. ೯: ಕೀರೆಹೊಳೆ ಹೊಳೆ ಬೈಪಾಸ್ ರಸ್ತೆಯ ಬದಿಯಲ್ಲಿರುವ ಕೈಕೇರಿ ತೋಡು ಪ್ರದೇಶ ನಿರಂತರ ಒತ್ತುವರಿಯಾಗುತ್ತಿರುವ ಹಿನ್ನೆಲೆ ಪೊನ್ನಂಪೇಟೆ ತಹಶೀಲ್ದಾರ್ ಎನ್.ಎಸ್. ಪ್ರಶಾಂತ್ ಸಮ್ಮುಖದಲ್ಲಿ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸಭೆ ಜರುಗಿತು.

ಈ ಹಿಂದೆ ತಹಶೀಲ್ದಾರ್ ಯೋಗಾನಂದ ಅವರು ಅಕ್ರಮ ಒತ್ತುವರಿ ತೆರವುಗೊಳಿಸಿದ ಸ್ಥಳದಲ್ಲಿ ಮತ್ತೆ ಆತಂಕಕಾರಿಯಾಗಿ ಅಕ್ರಮ ಕಟ್ಟಡಗಳು, ಸೇತುವೆಗಳು ತಲೆ ಎತ್ತುತ್ತಿದ್ದು ಈ ಬಗ್ಗೆ ಕೂಲಂಕುಷ ಚರ್ಚೆ ಹಾಗೂ ಕಾನೂನಾತ್ಮಕ ಕ್ರಮದ ಬಗ್ಗೆ ಮಾತುಕತೆ ನಡೆಯಿತು.

ಗೋಣಿಕೊಪ್ಪಲು ರಾಜಕಾಲುವೆ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ರೂ. ೯ ಕೋಟಿ ವೆಚ್ಚದ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದು, ಮೊದಲ ಹಂತದಲ್ಲಿ ರೂ. ೬.೫೦ ಕೋಟಿ ಹಣ ಮಂಜೂರಾಗಿದೆ. ಕೀರೆಹೊಳೆ ಹಾಗೂ ಕೈಕೇರಿ ತೋಡು ಗಡಿಗುರುತು ನಂತರವೇ ಕಾಮಗಾರಿ ಆರಂಭಿಸಬೇಕಾಗಿದೆ ಎಂದು ಶ್ರೀನಿವಾಸ್ ಸಭೆಗೆ ತಿಳಿಸಿದ್ದರು. ಈ ಬಗ್ಗೆ ಭೂ ಮಾಪನ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು

ಜಲಮೂಲ ಸರಹದ್ದು ಗುರುತಿಸುವ ಕೆಲಸ ಮೊದಲು ಆರಂಭಿಸಬೇಕಾಗಿದೆ ಎಂದರು. ಸಭೆಯಲ್ಲಿ ಜಲ ಸಂರಕ್ಷಣೆ ಕುರಿತು ಚರ್ಚೆ ನಡೆಯಿತು. ಸಭೆಯಲ್ಲಿ ಗೋಣಿಕೊಪ್ಪಲಿನಲ್ಲಿ ಕೀರೆಹೊಳೆ ಒತ್ತುವರಿ ಮತ್ತು ಸಂರಕ್ಷಣೆ, ಗ್ರಾಮ ಪಂಚಾಯಿತಿಯ ಮೇಲೆ ಸಾರ್ವಜನಿಕರು ಈ ಭಾಗದಲ್ಲಿ ಜಾಗ ಖರೀದಿಸಿ ನಿರಾಪೇಕ್ಷಣ ಪತ್ರಕ್ಕಾಗಿ ಒತ್ತಡ ಹೇರುತಿರುವ ಬಗ್ಗೆ ಗ್ರಾ.ಪಂ. ಸದಸ್ಯರುಗಳಾದ ಬಿ.ಎನ್. ಪ್ರಕಾಶ್, ಶ್ರೀನಿವಾಸ್, ದರ್ಶನ್, ಚೈತ್ರ ಚೇತನ್, ಸೌಮ್ಯ ಬಾಲು ಮಾತನಾಡಿದರು.

ಕಾವೇರಿ ಜಲಮೂಲ ಸಂರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್, ಮಾಜಿ ಅಧ್ಯಕ್ಷ ಪೂವಯ್ಯ. ಉಪಾಧ್ಯಕ್ಷೆ ಕುಸುಮ, ಪದಾಧಿಕಾರಿ ಗೋಪಿ ಚಿಣ್ಣಪ, ಕಂದಾಯ ಇಲಾಖಾಧಿಕಾರಿ ಸುಧೀಂದ್ರ, ಗೋಣಿಕೊಪ್ಪಲು ಗ್ರಾ.ಪಂ. ಅಧ್ಯಕೆÀ್ಷ ಸೌಮ್ಯ ಬಾಲು, ಹಾತೂರು ಪಂಚಾಯಿತಿ ಅಧ್ಯಕ್ಷ ದರ್ಶನ್, ಅರುವತ್ತೋಕ್ಲು ಪಂಚಾಯಿತಿ ಅಧ್ಯಕ್ಷ ಸೋಮಣ್ಣ, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಸದಸ್ಯ ಬಿ.ಎನ್. ಪ್ರಕಾಶ್. ಮಾಜಿ ಅಧ್ಯಕ್ಷೆ ಚೈತ್ರ ಚೈತನ್, ಸದಸ್ಯರಾದ ರತಿ ಅಚಪ್ಪ, ಕೊಲ್ಲಿರ ಧರ್ಮಜ, ಕುಶಾಲಪ್ಪ, ನಾಮೇರ ದೇವಯ್ಯ ಮುಂತಾದವರು ಉಪಸ್ಥಿತರಿದ್ದರು.