ಗೋಣಿಕೊಪ್ಪ ವರದಿ, ಮಾ. ೯: ಕಾವೇರಿ ಮಹಿಳಾ ಸಮಾಜದಲ್ಲಿ ಬುಧವಾರ ಮಹಿಳಾ ದಿನಾಚರಣೆ ಆಚರಿಸಲಾಯಿತು. ನವೀಕರಣ ಗೊಂಡ ಸಮಾಜದ ಕಟ್ಟಡದಲ್ಲಿ ಗಣಪತಿ ಹೋಮ ನಡೆಸುವ ಮೂಲಕ ಕಾರ್ಯ ಚಟುವಟಿಕೆಗೆ ಮತ್ತೆ ಚಾಲನೆ ನೀಡಲಾಯಿತು.
ಸದಸ್ಯರಿಗೆ ವಿವಿಧ ಕ್ರೀಡಾಕೂಟ ನಡೆಯಿತು. ಸಮಾಜದ ಕಾರ್ಯದರ್ಶಿ ಕೊಣಿಯಂಡ ಬೋಜಮ್ಮ ಉತ್ತಪ್ಪ ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಮಹಿಳೆಯರು ಕುಟುಂಬದ ಅಭಿವೃದ್ಧಿ, ಸಾಮಾಜಿಕ ಕಾಳಜಿಯೊಂದಿಗೆ ದೇಶದ ಅಭಿವೃದ್ಧಿಗೆ ಮತ್ತಷ್ಟು ಕೈಜೋಡಿಸಬೇಕಿದೆ. ಮಹಿಳಾ ಸಬಲೀಕರಣಕ್ಕೆ ಸರ್ಕಾರ ಕೂಡ ಪ್ರೋತ್ಸಾಹ ನೀಡುತ್ತಿದೆ ಎಂದರು.
ಸಮಾಜದ ಅಧ್ಯಕ್ಷೆ ಕಟ್ಟೇರ ಉತ್ತರೆ ಅಪ್ಪಚ್ಚು, ಉಪಾಧ್ಯಕ್ಷೆ ಚಂಬಾAಡ ಲತಾ ಅಕ್ಕಮ್ಮ ಇದ್ದರು.