ವೀರಾಜಪೇಟೆ, ಮಾ. ೯: ವೀರಾಜಪೇಟೆ ಪುರಸಭೆ ವಾರ್ಷಿಕ ಹರಾಜಿನಲ್ಲಿ ಒಂದು ಲಕ್ಷ ಹನ್ನೊಂದು ಸಾವಿರದ ಆರುನೂರು ರೂಪಾಯಿ ಲಾಭ ಗಳಿಸಿದೆ.
ಪುರಸಭೆಯ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ಗೈರಿನಲ್ಲಿ ಮುಖ್ಯಾಧಿಕಾರಿ ಚಂದ್ರಕುಮಾರ್ ನೇತೃತ್ವದಲ್ಲಿ ವಾರ್ಷಿಕ ಹರಾಜು ನಡೆಯಿತು. ಹಂದಿಮಾAಸ ಮಳಿಗೆ, ಮೀನುಮಳಿಗೆ, ಸಂತೆ ಸುಂಕ, ವಾಹನ ಶುಲ್ಕದಲ್ಲಿ ಒಟ್ಟು ರೂ.೧೧,೧೪,೯೦೦ ಗಳಿಗೆ ಹರಾಜು ನಡೆದಿದೆ.
ಪುರಸಭೆಯ ವಾರ್ಷಿಕ ಹರಾಜಿನಲ್ಲಿ ಖಾಸಗಿ ಬಸ್ ನಿಲ್ದಾಣದೊಳಗೆ ವಾಹನ ಶುಲ್ಕ ಎತ್ತಾವಳಿ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿ ಹರಾಜಿನಲ್ಲಿ ಭಾಗವಹಿಸಿದ್ದ ಬಿಡ್ದಾರರು ಮತ್ತು ಮುಖ್ಯಾಧಿಕಾರಿ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಕೆಲವರು ಕೈಕೈ ಮಿಲಾಯಿಸಲು ಮುಂದಾದ ಘಟನೆ ನಡೆಯಿತು. ಕೊನೆಗೆ ವಾದ ವಿವಾದಗಳ ಬಳಿಕ ಖಾಸಗಿ ಬಸ್ ನಿಲ್ದಾಣಕ್ಕೆ ಮಾತ್ರ ಸೀಮಿತವಾಗಿ ವಾಹನ ನಿಲುಗಡೆ ಶುಲ್ಕಕ್ಕೆ ಹರಾಜು ನಡೆಸಲಾಯಿತು.
ಇದಕ್ಕೆ ಬಿಡ್ದಾರರು ಆಕ್ಷೇಪಿಸಿ ನಿಗದಿಯಂತೆ ತಮಗೆ ನೀಡಿದ ಹರಾಜು ಪಟ್ಟಿಯಲ್ಲಿ ನಮೂದಿಸಿದಂತೆ ಪುರಸಭೆಯ ಮುಖ್ಯ ರಸ್ತೆಯಲ್ಲಿ ನಿಲುಗಡೆ ಶುಲ್ಕಕ್ಕೆ ಸಂಬAಧಿಸಿದAತೆ ಹರಾಜು ನಡೆಸಿ ಎಂದು ಆಗ್ರಹಿಸಿದರು. ಮುಖ್ಯಾಧಿಕಾರಿ ಚಂದ್ರಕುಮಾರ್ ನಮ್ಮ ನಿರ್ಧಾರದಂತೆ ಮಾತ್ರ ಹರಾಜು ನಡೆಯುತ್ತದೆ, ನೀವು ಖಾಸಗಿ ಬಸ್ ನಿಲ್ದಾಣಕ್ಕೆ ಸೀಮಿತ ಹರಾಜನ್ನು ನಡೆಸಿಕೊಡಿ ಎಂದು ಹೇಳಿದರು.