ಮಡಿಕೇರಿ, ಮಾ. ೯: ಅರಣ್ಯ ಉತ್ಪನ್ನವಾದ ಬೀಟೆ ಮರದ ಸೊತ್ತುಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ಮಾರುತಿ ಸುಜುಕಿ ೮೦೦ ಕಾರು ವಾಹನ ನೋಂದಣಿ ಸಂಖ್ಯೆ ಕೆಎ-೦೧-ಪಿ-೩೭೯೦ ನ್ನು ಕುಶಾಲನಗರ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ ೨೭/೨೦೨೨-೨೩, ೨೦೨೩ ರ ಫೆಬ್ರವರಿ, ೦೨ ರಲ್ಲಿ ಅಮಾನತ್ತುಪಡಿಸಿದ್ದು, ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ, ಮಡಿಕೇರಿ ಇವರ ನ್ಯಾಯಾಲಯದಲ್ಲಿ ಈ ಪ್ರಕರಣವು ವಿಚಾರಣೆಯಲ್ಲಿದೆ.
ಅರಣ್ಯ ಉತ್ಪನ್ನವಾದ ತೇಗದ ಮರದ ಸೊತ್ತುಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ಮಾರುತಿ ಓಮ್ನಿ ವಾಹನ ನೋಂದಣಿ ಸಂಖ್ಯೆ ಕೆಎ ೧೨ಪಿ ೭೯೫೦ ನ್ನು ಕುಶಾಲನಗರ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ ೨೬/೨೦೨೨-೨೩ ದಿ :-೧೩-೦೧-೨೦೨೩ ರಲ್ಲಿ ಅಮಾನತ್ತುಪಡಿಸಿದ್ದು, ಅರಣ್ಯ ಉತ್ಪನ್ನವಾದ ಬೀಟೆ ಮರದ ಸೊತ್ತುಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ಮಾರುತಿ ಓಮ್ನಿ ವಾಹನ ನೋಂದಣಿ ಸಂಖ್ಯೆ ಕೆಎ ೦೧ ಪಿ ೧೬೨೦ ನ್ನು ಕುಶಾಲನಗರ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ ೧೩/೨೦೧೯-೨೦-೨೩ ದಿ ೩೦-೦೮-೨೦೧೯ ರಲ್ಲಿ ಅಮಾನತ್ತುಪಡಿಸಿದ್ದು, ಅರಣ್ಯ ಉತ್ಪನ್ನವಾದ ಹಲಸಿನ ಮರದ ಸೊತ್ತುಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ಮಹೇಂದ್ರ ಪಿಕ್ಅಪ್ ವಾಹನ ನೋಂದಣಿ ಸಂಖ್ಯೆ ಕೆಎ.೧೨ಎ ೩೫೮೨ ನ್ನು ಕುಶಾಲನಗರ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ ೨೦/೨೦೨೨-೨೩ ದಿ. ೨೦-೦೧-೨೦೨೩ ರಲ್ಲಿ ಅಮಾನತ್ತುಪಡಿಸಿದ್ದು, ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ, ಮಡಿಕೇರಿ ಇವರ ನ್ಯಾಯಾಲಯದಲ್ಲಿ ಈ ಪ್ರಕರಣವು ವಿಚಾರಣೆಯಲ್ಲಿದೆ.
ಈ ವಾಹನಗಳ ಹಕ್ಕುಬಾಧÀ್ಯತೆ ಸಲ್ಲಿಸುವ ಕುರಿತು ೩೦ ದಿನದೊಳಗೆ ಮಾಲೀಕತ್ವದ ಪೂರ್ಣ ದಾಖಲಾತಿಗಳೊಂದಿಗೆ ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ, ಮಡಿಕೇರಿ ನ್ಯಾಯಾಲಯಕ್ಕೆ ಅಹವಾಲು ಸಲ್ಲಿಸಬೇಕಿದೆ. ಇಲ್ಲದಿದ್ದಲ್ಲಿ ಸರ್ಕಾರದ ಪರ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ವಿವರಗಳಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿ, ಮಡಿಕೇರಿ ಇಲ್ಲಿ ಕೆಲಸದ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.