ಮಡಿಕೇರಿ, ಮಾ. ೯: ಪ್ರಬಾರ ವಲಯ ಅರಣ್ಯಾಧಿಕಾರಿಯಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಉಪ ಅರಣ್ಯ ಸಂರಕ್ಷಣಾಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂರ್ಣಿಮಾ ಎಂಬವರೇ ಮಡಿಕೇರಿ ಸಾಮಾಜಿಕ ಅರಣ್ಯ ವಲಯದ ಪ್ರಬಾರ ವಲಯ ಅರಣ್ಯಾಧಿಕಾರಿ ಮಯೂರ ಉದಯ ಕಾರವೇಕರ ಎಂಬವರಿAದ ೫೦ ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಲೋಕಾಯುಕ್ತ ಬಲೆಗೆ ಬಿದ್ದವರಾಗಿದ್ದಾರೆ.
ಮಯೂರ ಉದಯ ಕಾರವೇಕರ ಅವರ ಕರ್ತವ್ಯ ವ್ಯಾಪ್ತಿಯಲ್ಲಿ ಬರುವ ಹೊದ್ದೂರು, ವಾಟೆಕಾಡು ನರ್ಸರಿಯಲ್ಲಿ ಕರ್ತವ್ಯ ನಿರ್ವಹಿಸಲು ಇಬ್ಬರು ವಾಚರ್ಗಳನ್ನು ನೇಮಿಸಿಕೊಳ್ಳಲು ಸರ್ಕಾರ ಅವಕಾಶ ನೀಡಿದ್ದು, ಅದರಂತೆ ಮಯೂರ ಉದಯ ಕಾರವೇಕರ ಅವರು ಓರ್ವ ವಾಚರ್ನ್ನು ನೇಮಿಸಿಕೊಂಡು ಸರ್ಕಾರದ ನಿಯಮದಂತೆ ತಿಂಗಳಿಗೆ ೧೫೦೦೦ ರೂ. ವೇತನ ನೀಡಲಾಗುತ್ತಿತ್ತು.
ಆದರೆ, ಪೂರ್ಣಿಮಾ ಅವರು ಇನ್ನೊಬ್ಬ ವಾಚರ್ನ್ನು ನೇಮಿಸಿಕೊಂಡAತೆ ಸುಳ್ಳು ದಾಖಲೆ ಸೃಷ್ಟಿಮಾಡಿ ವಾಚರ್ನ ಪ್ರತಿ ತಿಂಗಳ ವೇತನವನ್ನು ತನಗೆ ನೀಡುವಂತೆ ಒತ್ತಾಯಿಸುತ್ತಿದ್ದರು. ಅಲ್ಲದೇ ಇಲಾಖಾ ವತಿಯಿಂದ ೨ ಕಾಮಗಾರಿಗಳನ್ನು ನಡೆಸಿದ್ದು,
(ಮೊದಲ ಪುಟದಿಂದ) ಕಾಮಗಾರಿಯ ಒಟ್ಟು ಮೊತ್ತ ಸುಮಾರು
೧,೬೦,೦೦೦ ಗಳಾಗಿದ್ದು, ಕಾಮಗಾರಿಗಳ ಮೊತ್ತದ ೬೦ ಪರ್ಸೆಂಟ್ ಹಣವನ್ನು ಅಂದರೆ ಸುಮಾರು ೧,೦೦,೦೦೦ ಲಕ್ಷ ರೂ.ಗಳನ್ನು ತಂದುಕೊಡುವAತೆ ಒತ್ತಾಯಿಸುತ್ತಿದ್ದರು. ಕಾಮಗಾರಿಗಳನ್ನು ಪಾರದರ್ಶಕವಾಗಿ ಹಾಗೂ ಪ್ರಾಮಾಣಿಕವಾಗಿ ನಿರ್ವಹಿಸಿದ್ದು, ಯಾವುದೇ ಲಂಚವನ್ನು ಸ್ವೀಕರಿಸದ ಕಾರಣ ೬೦ ಪರ್ಸೆಂಟ್ ಲಂಚ ಕೊಡಲು ಸಾಧ್ಯವಿಲ್ಲ ಎಂದು ಮಯೂರ ಉದಯ ಕಾರವೇಕರ ತಿಳಿಸಿದಾಗ ಪೂರ್ಣಿಮಾ ಅವರು ಅಸಮಾಧಾನಗೊಂಡು ಸಾರ್ವಜನಿಕವಾಗಿ ನಿಂದಿಸುತ್ತಿದ್ದರು. ಅಲ್ಲದೆ, ರಿಪೋರ್ಟ್ ಹಾಕಿ ಸಸ್ಪೆಂಡ್ ಮಾಡಿಸುವುದಾಗಿ ಬೆದರಿಸುತ್ತಿದ್ದರು. ಲಂಚವನ್ನು ಕೊಡಲೇಬೇಕು ಎಂದು ಒತ್ತಾಯಿಸಿದಾಗ ಮುಂಗಡವಾಗಿ ರೂ.೫೦,೦೦೦ ಹಣವನ್ನು ನೀಡಲಾಗಿತ್ತು. ಆರೋಪಿತರು ೬೦ ಪರ್ಸೆಂಟ್ ಲಂಚಕ್ಕೆ ಒತ್ತಾಯಿಸಿದಾಗ ಸಂಭಾಷಣೆಯನ್ನು ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದ ಉದಯ ಮಯೂರ ಕಾರವೇಕರ ಲಂಚಕೊಡಲು ಇಷ್ಟ ಇಲ್ಲದ ಕಾರಣ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಇಂದು ಮಡಿಕೇರಿ ನಗರದ ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿಗಳ ಕಚೇರಿಯ (ಅರಣ್ಯ ಭವನ) ಮುಂಭಾಗದ ಆವರಣದಲ್ಲಿ ಪೂರ್ಣಿಮಾ ಅವರ ಸೂಚನೆಯಂತೆ ಮಯೂರ ಉದಯ ಕಾರವೇಕರ ಅವರು, ರೂ. ೫೦,೦೦೦ ಹಣದ ಕವರನ್ನು ಪೂರ್ಣಿಮಾ ಅವರ ಜೀಪಿನಲ್ಲಿ ಇಡುವಾಗ ಲೋಕಾಯುಕ್ತ ಧಾಳಿ ನಡೆದಿದೆ. ಪೂರ್ಣಿಮಾ ಅವರನ್ನು ಬಂಧಿಸಿ ಮುಂದಿನ ಕ್ರಮಕೈಗೊಳ್ಳಲಾಗಿದೆ.
ಅಪರ ಪೊಲೀಸ್ ಮಹಾನಿರ್ದೇಶಕರಾದ ಪ್ರಶಾಂತ್ಕುಮಾರ್ ಠಾಕೂರ್, ಪೊಲೀಸ್ ಮಹಾನಿರೀಕ್ಷಕರಾದ ಡಾ|| ಎ. ಸುಬ್ರಮಣ್ಯೇಶ್ವರ ರಾವ್, ಮೈಸೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಸುರೇಶ್ ಬಾಬು ಮತ್ತು ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ ಎಂ.ಎಸ್. ಪವನ್ಕುಮಾರ್, ಮೈಸೂರು ಲೋಕಾಯುಕ್ತ ಡಿವೈಎಸ್ಪಿ ಕೃಷ್ಣಯ್ಯ ವಿ. ಅವರ ಮಾರ್ಗದರ್ಶನದಲ್ಲಿ ಕೊಡಗು ಜಿಲ್ಲೆಯ ಪೊಲೀಸ್ ನಿರೀಕ್ಷಕರಾದ ಲೋಕೇಶ ಹಾಗೂ ಮೈಸೂರು ಜಿಲ್ಲೆಯ ಪೊಲೀಸ್ ನಿರೀಕ್ಷಕರಾದ ಜಯರತ್ನ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.