ಗೋಣಿಕೊಪ್ಪಲು, ಮಾ. ೯: ಬಣ್ಣ ಬಣ್ಣ ಉಡುಗೆ ತೊಟ್ಟು ಬಂದ ಮಹಿಳೆಯರು, ತಮಗೆ ಇಷ್ಟ ಬಂದ ಸ್ಪರ್ಧೆಯಲ್ಲಿ ತಾಮುಂದು ನಾಮುಂದು ಎಂಬAತೆ ಭಾಗವಹಿಸುವ ಮೂಲಕ ದಿನಪೂರ್ತಿ ಸಂಭ್ರಮಿಸಿದರು. ಒಬ್ಬರಿ ಗೊಬ್ಬರು ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಹಂಚಿಕೊಳ್ಳುತ್ತ ಖುಷಿಪಟ್ಟರು. ಮುಂಜಾನೆಯಿAದ ಸಂಜೆವರೆಗೂ ತಮ್ಮ ದೈನಂದಿನ ಜಂಜಾಟವನ್ನು ಬದಿಗೊತ್ತಿ ಸ್ನೇಹಿತ ರೊಂದಿಗೆ ತಮ್ಮ ಸಂತೋಷವನ್ನು ಹಂಚಿಕೊಳ್ಳುವ ಮೂಲಕ ರಾಷ್ಟಿçÃಯ ಮಹಿಳಾ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿAದ ಕಳೆದರು.

ಗೋಣಿಕೊಪ್ಪಲುವಿನ ಮಹಿಳಾ ಬ್ಯಾಂಕ್ ಸಂಜೀವಿನಿ ಒಕ್ಕೂಟ ಹಾಗೂ ಜನನಿ ಪೊಮ್ಮಕ್ಕಡ ಕೂಟದ ವತಿಯಿಂದ ರಾಷ್ಟಿçÃಯ ಮಹಿಳಾ ದಿನಾಚರಣೆಯು ನಗರದ ಸ್ವಾತಂತ್ರö್ಯ ಹೋರಾಟಗಾರರ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ವಿವಿಧ ರೀತಿಯ ಸ್ಪರ್ಧೆಗಳು ಆಯೋಜನೆ ಗೊಂಡಿದ್ದವು. ದಿನಾಚರಣೆಯ ಅಂಗವಾಗಿ ರಾಗಿ ಬೀಸುವುದು, ರೊಟ್ಟಿ ತಟ್ಟುವುದು, ಬಲೂನ್ ಊದುವುದು, ರಸಪ್ರಶ್ನೆ, ಬೆಂಕಿ ಇಲ್ಲದೆ ಅಡಿಗೆ ತಯಾರಿಕೆ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳು ಗಮನ ಸೆಳೆದವು.

ಜಾನಪದ ಹಾಡಿನೊಂದಿಗೆ ಮಹಿಳೆಯರು ರಾಗಿ ಬೀಸುವ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಜಾನಪದಕ್ಕೆ ಪ್ರಾತಿನಿಧ್ಯ ಕೊಡುವ ನಿಟ್ಟಿನಲ್ಲಿ ಆಸಕ್ತಿ ವಹಿಸಿದರು. ಅಕ್ಕಿ ರೊಟ್ಟಿ ತಟ್ಟುವ ಸ್ಪರ್ಧೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಮೂರು ನಿಮಿಷಗಳಲ್ಲಿ ರೊಟ್ಟಿಯನ್ನು ತಯಾರಿಸಿ ಗಮನ ಸೆಳೆದರು. ಮಹಿಳೆಯರಿಗಾಗಿಯೇ ದಿನಪೂರ್ತಿ ಹಲವು ಕಾರ್ಯಕ್ರಮಗಳನ್ನು ಸಮಿತಿಯು ಆಯೋಜಿಸಿತ್ತು. ಕಾರ್ಯಕ್ರಮದ ಅಂಗವಾಗಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಲಾಯಿತು. ಹಲವು ಕ್ರೀಡೆಗಳಲ್ಲಿ ಮಹಿಳೆಯರು ಭಾಗವಹಿಸಿ ಮೆಚ್ಚುಗೆ ಗಳಿಸಿದರು.

ಮುಂಜಾನೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ಬ್ಯಾಂಕಿನ ಅಧ್ಯಕ್ಷರಾದ ಕುಲ್ಲೆಟಿರ ಪ್ರವಿ ಮೊಣ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳಾ ದಿನಾಚರಣೆ ಯಂದು ಮಹಿಳೆಯರು ಒಂದೆಡೆ ಸೇರಿ ತಮ್ಮಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ವೇದಿಕೆ ಕಲ್ಪಿಸಲಾಗಿದೆ. ಪ್ರತಿನಿತ್ಯ ಜಂಜಾಟ ದಿಂದ ಹೊರ ಬಂದು ಸ್ನೇಹಿತ ರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಬ್ಯಾಂಕ್ ಉಪಾಧ್ಯಕ್ಷೆ ಕಡೆಮಾಡ ಕುಸುಮ ಜೋಯಪ್ಪ, ಸದಸ್ಯರಾದ ಕೊಟ್ಟಂಗಡ ಅಮ್ಮಕ್ಕಿ ಪೂವಯ್ಯ, ತೀತಿರ ಅನಿತಾ ಸುಬ್ಬಯ್ಯ, ಎಂ. ಮಂಜುಳ, ಚೇಂದAಡ ಸುಮಿ ಸುಬ್ಬಯ್ಯ, ವರಲಕ್ಷಿö್ಮ, ರಾಣಿ ನಾರಾಯಣ, ಎಂ.ಕೆ. ಶೀಲಾ ಸೇರಿದಂತೆ ಸಿಇಓ ಎ.ಟಿ. ಕಸ್ತೂರಿ, ಹೆಚ್.ಎಲ್. ಪ್ರೇಮ, ಸೇರಿದಂತೆ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಪೊನ್ನಂಪೇಟೆ ಪಬ್ಲಿಕ್ ಶಾಲೆಯ ಕನ್ನಡ ಪ್ರಾಧ್ಯಾಪಕಿ ನಳಿನಿ ಈಶ ಮಾತನಾಡಿ, ಮಹಿಳೆಯರು ಸಮಾಜದ ಕಣ್ಣು. ಈ ನಾಡಿಗೆ ಪೂರ್ವಜರ ಕೊಡುಗೆ ಅಪಾರವಾಗಿದೆ. ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುವತ್ತ ಹೆಜ್ಜೆ ಹಾಕಿದ್ದಾಳೆ. ಮಹಿಳೆಯ ವೈಭವ ಪ್ರದರ್ಶನ ಉಚಿತವಲ್ಲ. ಕ್ರೀಡೆ, ಸಾಹಿತ್ಯ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯ ಸಾಧನೆ ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಂಗವಾಗಿ ಹಿರಿಯ ಮಹಿಳಾ ಉದ್ಯಮಿ ಚೇಂದAಡ ಸುಮಿ ಸುಬ್ಬಯ್ಯ, ನಿವೃತ್ತ ಶಿಕ್ಷಕಿ ಕೊಟ್ಟಂಗಡ ಅಮ್ಮಕ್ಕಿ ಪೂವಯ್ಯ ಹಾಗೂ ಸ್ತಿçà ಶಕ್ತಿ ಒಕ್ಕೂಟದ ಅಧ್ಯಕ್ಷೆ ರಜನಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಾಂಶುಪಾಲೆ ಗೀತಾ ನಾಯ್ಡು ಕಾರ್ಯಕ್ರಮ ನಿರೂಪಿಸಿ, ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ಪೊಮ್ಮಕ್ಕಡ ಕೂಟದ ಮೀನಾ ನಾಯಕಂಡ ಸ್ವಾಗತಿಸಿ, ಸಿಇಓ ಕಸ್ತೂರಿ ವಂದಿಸಿದರು. ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ವಿಜೇತ ರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು.