ಸೋಮವಾರಪೇಟೆ, ಮಾ. ೯: ಸಮೀಪದ ಗೌಡಳ್ಳಿ ಬಿಜಿಎಸ್ ಶಾಲೆಯ ಆವರಣದಲ್ಲಿ ಅಂತ ರ್ರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
‘ಮಾತೃತ್ವದಿಂದ ಕ್ರಿಯಾತತ್ವ’ ಹೆಸರಿನಲ್ಲಿ ಮಕ್ಕಳ ಅಮ್ಮಂದಿರ ಪ್ರತಿಭಾ ಪ್ರದರ್ಶನ ಕಾರ್ಯಕ್ರಮಗಳು ನಡೆದವು. ಶಾಲಾ ಮಕ್ಕಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿ ಅಲ್ಲಿನ ಶಿಕ್ಷಕರಿಗೆ ಹೂ ನೀಡಿ ಶುಭಾಶಯ ಕೋರಿದರು.
ಶಾಲೆಯ ಮುಖ್ಯೋಪಾ ಧ್ಯಾಯಿನಿ ರತ್ನ ದೇವೇಗೌಡ ಅವರು ಅರಿಶಿನ ಕುಂಕುಮದೊAದಿಗೆ ಮಹಿಳೆಯರಿಗೆ ಬಾಗಿನ ನೀಡಿ ಶುಭಕೋರಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿಯರಿಗೆ, ಗೌಡಳ್ಳಿ ಗ್ರಾಮ ಪಂಚಾಯಿತಿ ಮಹಿಳಾ ಸಿಬ್ಬಂದಿಗಳಿಗೆ ಮಕ್ಕಳು ಮತ್ತು ಶಿಕ್ಷಕರು ಪುಷ್ಪಗುಚ್ಛ ನೀಡಿ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದರು. ಪ್ರಪಂಚದಾದ್ಯAತ ಪ್ರೀತಿ ಮತ್ತು ಸಂತೋಷದಿAದ ಆಚರಿಸಲ್ಪಡುವ ಮಹಿಳಾ ದಿನಾಚರಣೆಯು ಸಮಾಜದಲ್ಲಿ ಮಹಿಳೆಯರ ಪಾತ್ರವನ್ನು ತಿಳಿಸಲು ಸಹಕಾರಿ ಯಾಗಿದೆ.
ಮಹಿಳಾ ಸಬಲೀಕರಣದ ಅಗತ್ಯವಿದ್ದು, ಎಲ್ಲಾ ಮಹಿಳೆಯರು ಆರ್ಥಿಕ, ಸಾಮಾಜಿಕ, ರಾಜಕೀಯ ವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ ಎಂದು ಮುಖ್ಯೋಪಾ ಧ್ಯಾಯಿನಿ ರತ್ನ ದೇವೇಗೌಡ ಅಭಿಪ್ರಾಯಿಸಿದರು. ಪ್ರಪಂಚದಾದ್ಯAತ ಮಹಿಳೆಯರು ಸಮಾಜದ ಒಳಿತಿಗೆ ಅಪಾರ ಕೊಡುಗೆ ನೀಡುವ ಮೂಲಕ ಜಗತ್ತನ್ನು ಬದಲಾಯಿಸುತ್ತಿದ್ದಾರೆ. ಮಹಿಳಾ ದಿನಾಚರಣೆಯು ಮಹಿಳೆಯರ ಜೀವನದಲ್ಲಿ ಮತ್ತು ಸಮಾಜದಲ್ಲಿ ಮಹಿಳೆಯರ ಬಗ್ಗೆ ಮೆಚ್ಚುಗೆ, ಗೌರವ, ಪ್ರೀತಿ ಮತ್ತು ಕಾಳಜಿಯ ಸಂಕೇತವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಹಶಿಕ್ಷಕರಾದ ಪ್ರಕೃತಿ, ಸುನಿತಾ, ರೋಸ್ಲಿನ್, ಸುರಕ್ಷಿತ, ಧನಂಜಯ್ ಸೇರಿದಂತೆ ಇತರರು ಉಪಸ್ಥಿತರಿದ್ದರು.