ಮಡಿಕೇರಿ, ಮಾ. ೯ : ಮಡಿಕೇರಿ ನಗರ ವ್ಯಾಪ್ತಿಯ ಕೊಹಿನೂರು ರಸ್ತೆಯಿಂದ ಶಾಸ್ತಿç ನಗರಕ್ಕೆ ಸಂಪರ್ಕ ಕಲ್ಪಿಸುವ ಕಾಲು ರಸ್ತೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅಡ್ಡಗೋಡೆ ಹಾಗೂ ಗಣಪತಿ ಬೀದಿಯಲ್ಲಿ ಕೊಂಗಾAಡ ಗಣಪತಿ ಅವರ ಪುತ್ಥಳಿ ನಿರ್ಮಾಣ ಮಾಡಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನಗರಸಭೆಯನ್ನು ಒತ್ತಾಯಿಸಿದೆ.
ಕಳೆದ ತಾ.೪ರಂದು ನಗರ ಸಭಾಧ್ಯಕ್ಷೆ ಅನಿತಾ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಎಸ್ಡಿಪಿಐ ಸದಸ್ಯ ಅಮೀನ್ ಮೊಹಿಸಿನ್; ಕೊಹಿನೂರು ರಸ್ತೆಯಿಂದ ಶಾಸ್ತಿç ನಗರಕ್ಕಾಗಿ ತೆರಳಲು ಬಹಳ ಹಿಂದಿನಿAದಲೇ ಕಾಲುದಾರಿಯೊಂದು ಇತ್ತು. ಇದೀಗ ಆ ದಾರಿಗೆ ಅಡ್ಡಲಾಗಿ ಏಲಕ್ಕಿ ಸಹಕಾರ ಸಂಘದವರು ಅಡ್ಡಗೋಡೆ ನಿರ್ಮಿಸಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿದ್ದರೂ ಏಕಾಏಕಿ ಗೋಡೆ ನಿರ್ಮಾಣ ಮಾಡಿರುವದು ಸರಿಯಲ್ಲ. ಕೂಡಲೇ ನಗರಸಭೆ ಈ ಗೋಡೆಯನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದರು. ದನಿಗೂಡಿಸಿದ ವಾರ್ಡ್ ಸದಸ್ಯ ರಾಜೇಶ್ ಯಲ್ಲಪ್ಪ ಈ ಬಗ್ಗೆ ತನ್ನ ಗಮನಕ್ಕೂ ಬಂದಿದ್ದು, ಪರಿಶೀಲಿಸುವದಾಗಿ ಹೇಳಿದರು. ಪೌರಾಯುಕ್ತ ವಿಜಯ್ ಮಾತನಾಡಿ ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು.
ಪುತ್ಥಳಿಗೆ ಒತ್ತಾಯ
ಈ ಹಿಂದೆ ಉಪ ವಿಭಾಗಾಧಿಕಾರಿಯಾಗಿದ್ದ ದಿ.ಕೊಂಗಾAಡ ಗಣಪತಿ ಅವರು ಅರ್ಧ ಭಾಗ ಮಡಿಕೇರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದವರಾಗಿದ್ದಾರೆ. ಹಾಗಾಗಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಗಣಪತಿ ಬೀದಿಯ ಎರಡೂ ಕಡೆಗಳಲ್ಲಿ ಅವರ ಹೆಸರಿನ ನಾಮಫಲಕ ಅಳವಡಿಸಬೇಕು. ಖಾಲಿ ಇರುವ ಜಾಗದಲ್ಲಿ ಉದ್ಯಾನದ ರೀತಿಯಲ್ಲಿ ಅವರ ಪುತ್ಥಳಿಯನ್ನು ನಿರ್ಮಾಣ ಮಾಡಬೇಕೆಂದು ಅಮೀನ್ ಒತ್ತಾಯಿಸಿದರು. ಮಧ್ಯ ಪ್ರವೇಶಿಸಿದ ಬಿಜೆಪಿ ಸದಸ್ಯರುಗಳು ಪುತ್ಥಳಿ ನಿರ್ಮಾಣಕ್ಕೆ ನಕರಾತ್ಮಕ ಪ್ರತಿಕ್ರಿಯೆ ನೀಡಿದರು. ಯಾವದೇ ಕಾರಣಕ್ಕೂ ಕಾಟಾಚಾರಕ್ಕೆ ಫಲಕ ಅಳವಡಿಸುವಂತಾಗಬಾರದು, ಗೌರವಯುತವಾಗಿ ಕೆಲಸ ಆಗಬೇಕೆಂದು ಅಮೀನ್ ಪಟ್ಟು ಹಿಡಿದರು. ಈ ಬಗ್ಗೆ ಗಮನ ಹರಿಸುವದಾಗಿ ಪೌರಾಯುಕ್ತರು ಹೇಳಿದರು.