*ಗೋಣಿಕೊಪ್ಪ, ಮಾ. ೯: ಬೆಂಕಿಯ ಕೆನ್ನಾಲಿಗೆಗೆ ಕಾನನವು ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಾಗರಹೊಳೆ ಅರಣ್ಯದ ತಿತಿಮತಿ ಮತ್ತಿಗೋಡು ವಲಯ ವ್ಯಾಪ್ತಿಯಲ್ಲಿ ನಡೆದಿದೆ.
ಸುಮಾರು ೫೦೦ಕ್ಕೂ ಅಧಿಕ ಎಕರೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಕುಂಞÄರಾಮು ಕಟ್ಟೆ ಅಂಚಿನಿAದ ಜಂಗಲ್ ಹಾಡಿ, ಆಯಿರ ಸುಳಿ ವ್ಯಾಪ್ತಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸುಮಾರು ೨೪ ಗಂಟೆಗಳ ಅವಧಿಯಲ್ಲಿ ಬೆಂಕಿ ನಂದಿಸಲು ಅರಣ್ಯ ಇಲಾಖೆ ಶ್ರಮ ವಹಿಸಿದೆಯಾದರೂ, ಬೆಂಕಿ ನಂದಿಸಲು ಸೂಕ್ತ ಸಿಬ್ಬಂದಿಗಳನ್ನು ಇಲಾಖೆ ನೇಮಿಸಿಕೊಳ್ಳದೇ ಇರುವುದರಿಂದ ಅನಾಹುತವನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಬೆರಳೆಣಿಕೆಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರ ಸಹಕಾರದಿಂದ ಬೆಂಕಿ ನಂದಿಸಲು ಸಾಹಸ ಮಾಡಬೇಕಾಯಿತು.
ಬೆಂಕಿ ನಂದಿಸಲು ವಿಶೇಷ ತಂಡ ರಚಿಸಿ ಸಿಬ್ಬಂದಿಗಳ ತಾತ್ಕಾಲಿಕ ನೇಮಕಾತಿ ನಡೆಸಬೇಕಾಗಿತ್ತು. ಆದರೆ, ಇಲಾಖೆ ಈ ಬಗ್ಗೆ ಗಮನ ಹರಿಸದ ಹಿನ್ನೆಲೆ ಕಾಡಿನಲ್ಲಿ ಬೆಂಕಿ ಹೊತ್ತಿಕೊಂಡಾಗ ತಕ್ಷಣಕ್ಕೆ ನಂದಿಸಲು ಸಾಧ್ಯವಾಗಿಲ್ಲ. ಇದರಿಂದ ಸುಮಾರು ೫೦೦ ಎಕರೆ ಕಾಡು ಬೆಂಕಿ ಕಾಣಿಸಿಕೊಂಡಿದೆ ಎಂಬದು ಸ್ಥಳೀಯರ ಆರೋಪವಾಗಿದೆ.
- ಎನ್.ಎನ್. ದಿನೇಶ್