ಕೂಡಿಗೆ, ಮಾ. ೯: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮದ ಗ್ರಾಮ ದೇವತಾ ಸಮಿತಿಯ ವತಿಯಿಂದ ಶ್ರೀ ಮಂಟಿಗಮ್ಮ ತಾಯಿಯ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಕಾವೇರಿ ನದಿಯಿಂದ ಮಂಗಳ ವಾದ್ಯದೊಂದಿಗೆ ಗಂಗಾ ಪೂಜೆ ಮತ್ತು ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯೊಂದಿಗೆ ಕಲಶ ಹೊತ್ತು ಗಂಗೆಯನ್ನು ತರಲಾಯಿತು. ನಂತರ ತಾಯಿಗೆ ವಿಶೇಷ ಹೋಮ, ಹವನ ಪೂಜೆ ನೆರವೇರಿಸಲಾಯಿತು.

ಶ್ರೀ ಮಂಟಿಗಮ್ಮ ದೇವಸ್ಥಾನಕ್ಕೆ ಕಳಸ ಪ್ರವೇಶದ ನಂತರ ಕಿರಿಕೊಡ್ಲಿ ವಿರಕ್ತ ಮಠದ ಶ್ರೀ ಸದಾಶಿವ ಸ್ವಾಮೀಜಿ ಅವರ ದಿವ್ಯ ಸಾನಿಧÀ್ಯದಲ್ಲಿ ಬನದ ಆವರಣದಲ್ಲಿ ಗಣಪತಿ ಹೋಮ, ರುದ್ರಾಭಿಷೇಕ, ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ನಂತರ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.

ಪ್ರತಿದಿನವು ವಿಶೇಷ ಪೂಜೆಗಳು ನಡೆಯಲಿದ್ದು, ೧೩ ರಂದು ಕಾವೇರಿ ನದಿಯ ದಂಡೆಯ ಹತ್ತಿರವಿರುವ ಶ್ರೀ ಉಮಾಮಹೇಶ್ವರ ಸ್ವಾಮಿ ರಥೋತ್ಸವ ಕಾರ್ಯಕ್ರಮ ನಡೆಯಲಿದೆ. ೧೪ ಮತ್ತು ೧೫ ರಂದು ಮಂಟಿಗಮ್ಮ ಉತ್ಸವ ಮತ್ತು ಶ್ರೀ ಉಮಾಮಹೇಶ್ವರ ಸ್ವಾಮಿ ಉತ್ಸವದ ನಂತರ ತೆಪ್ಪೋತ್ಸವ ನಡೆಯಲಿದೆ ಎಂದು ಗ್ರಾಮದೇವತಾ ಸಮಿತಿಯ ಅಧ್ಯಕ್ಷ ರುದ್ರಪ್ಪ ತಿಳಿಸಿದ್ದಾರೆ. ಈ ಸಂದರ್ಭ ಕಾರ್ಯ ದರ್ಶಿ ಮಹೇಶ್, ಪ್ರಮುಖರಾದ ಶುಂಠಿ ರವಿ, ನಂಜುAಡಪ್ಪ, ಚಂದ್ರ ಶೇಖರ್, ಲೋಕೇಶ್, ಬಸವಣ್ಣ, ಶಿರಂಗಾಲ ಮೂಡ್ಲಲುಕೊಪ್ಪಲು ಸೇರಿದಂತೆ ಸುತ್ತಮುತ್ತಲಿನ ಭಕ್ತರು, ಸಾರ್ವಜನಿಕರು ಭಾಗವಹಿಸಿದ್ದರು. ಎಲ್ಲಾ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.