ಮಡಿಕೇರಿ, ಮಾ. ೯: ದ್ವಿತೀಯ ಪಿಯುಸಿ ಪರೀಕ್ಷೆ ರಾಜ್ಯದಲ್ಲಿ ಇಂದಿನಿAದ ಆರಂಭಗೊAಡಿದೆ. ಆರಂಭಿಕ ದಿನದಂದು ಕನ್ನಡ ಪರೀಕ್ಷೆ ಜರುಗಿದ್ದು, ಕೊಡಗು ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಬೇಕಿದ್ದವರ ಪೈಕಿ ೧೫೪ ಮಂದಿ ಗೈರು ಹಾಜರಾಗಿದ್ದಾರೆ. ಒಟ್ಟು ೪,೫೦೬ ಮಂದಿ ಈ ಬಾರಿಯ ಪರೀಕ್ಷೆಗೆ ಹಾಜರಾಗಬೇಕಿತ್ತು. ಇವರ ಪೈಕಿ ೪,೩೫೨ ಮಂದಿ ಪಾಲ್ಗೊಂಡಿದ್ದು, ೧೫೪ ಮಂದಿ ಗೈರಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ೧೯ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಆರಂಭಗೊAಡಿದ್ದು, ಸುಸೂತ್ರವಾಗಿ ಜರುಗಿರುವುದಾಗಿ ಡಿಡಿಪಿಯು ಪುಟ್ಟರಾಜು ಅವರು ತಿಳಿಸಿದ್ದಾರೆ.