ಗೋಣಿಕೊಪ್ಪ ವರದಿ, ಮಾ. ೯: ಕೊಡಗು ಜಿಲ್ಲೆಯಿಂದ ಅಂರ್ರಾಷ್ಟಿçÃಯ ಹಾಕಿ ಆಟಗಾರರನ್ನು ನೀಡಿರುವ ಗೋಣಿಕೊಪ್ಪ ಲಯನ್ಸ್ ಸಂಸ್ಥೆ ತನ್ನ ೫೦ನೇ ವರ್ಷದ ಪೂರೈಸಿದೆ. ಇದರ ನೆನಪಿಗಾಗಿ ಶಾಲೆಯ ಅಂಗಳದಲ್ಲಿ ಟರ್ಫ್ ಹಾಕಿ (ಕೃತಕ ಹುಲ್ಲು ಹಾಸು) ಮೈದಾನವನ್ನು ನಿರ್ಮಿಸಿದೆ. ಇದರೊಂದಿಗೆ ಶಾಲಾ ಅಂಗಳದಲ್ಲಿ ಟರ್ಫ್ ಮೈದಾನ ಹೊಂದಿರುವ ಜಿಲ್ಲೆಯ ಏಕೈಕ ಶಾಲೆ ಎಂಬ ಕೀರ್ತಿಗೆ ಲಯನ್ಸ್ ಶಾಲೆ ಪಾತ್ರವಾಗಿದೆ. ತಾ. ೧೦ ರಂದು ಇದನ್ನು ಉದ್ಘಾಟಿಸಲಾಗುತ್ತಿದೆ.
ಲಯನ್ಸ್ ಶಾಲಾ ಅಂಗಳದಲ್ಲಿ ನಿತ್ಯ ತರಬೇತಿಗೆ ಪ್ರಯೋಜನ ವಾಗುವಂತೆ ೧೦೦x೯೦ ಅಳತೆಯಲ್ಲಿ ಕೃತಕ ಹುಲ್ಲು ಹಾಸಿನ ಹಾಕಿ ಮೈದಾನ ನಿರ್ಮಿಸಲಾಗಿದ್ದು, ಇದರೊಂದಿಗೆ ವಾಲಿಬಾಲ್ ಕೋರ್ಟ್ ಕೂಡ ನಿರ್ಮಿಸಲಾಗಿದೆ. ಸುಮಾರು ರೂ. ೪೦ ಲಕ್ಷ ವೆಚ್ಚ ಮಾಡಲಾಗಿದೆ. ಗೋಣಿಕೊಪ್ಪ ಲಯನ್ಸ್ ಸಂಸ್ಥೆ ಅಧೀನದಲ್ಲಿರುವ ಲಯನ್ಸ್ ಶಾಲೆಯು ಭಾರತ ಹಾಕಿ ತಂಡಕ್ಕೆ ಕುಗ್ರಾಮದಿಂದ ಆಟಗಾರರನ್ನು ನೀಡಿದ ಹಿನ್ನೆಲೆ ಹೊಂದಿದೆ.
ಭಾರತ ಹಾಕಿ ತಂಡಕ್ಕೆ ಗೋಣಿಕೊಪ್ಪ ಲಯನ್ಸ್ ಶಾಲೆ ಸಾಕಷ್ಟು ಕೊಡುಗೆ ನೀಡಿದೆ. ಅಂರ್ರಾಷ್ಟಿçÃಯ ಹಾಕಿಯಲ್ಲಿ ಡ್ರಾö್ಯಗ್ ಫ್ಲಿಕರ್ ಖ್ಯಾತಿಯೊಂದಿಗೆ ಸಾಕಷ್ಟು ಬಾರಿ ಗೆಲುವು ತಂದುಕೊಟ್ಟಿರುವ, ೨ ಬಾರಿ ಒಲಂಪಿಯನ್ ಟೂರ್ನಿಯಲ್ಲಿ ಭಾಗವಹಿಸಿರುವ ಫುಲ್ಬ್ಯಾಕ್ ಆಟಗಾರ ವಿ.ಆರ್. ರಘುನಾಥ್, ಭಾರತ ಹಾಕಿ ವಿಶ್ವಕಪ್ ವಿಜೇತ ತಂಡದ ಆಟಗಾರ, ೨ ಬಾರಿ ಒಲಂಪಿಯನ್ನಲ್ಲಿ ಆಡಿರುವ ಸಣ್ಣುವಂಡ ಕೆ. ಉತ್ತಪ್ಪ, ಮುಕ್ಕಾಟೀರ ಬಿ. ಅಯ್ಯಪ್ಪ, ರಾಜ್ಯ ಕ್ರಿಕೆಟ್ ಬೌಲರ್, ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಮಾಚಿಮಾಡ ವಿದ್ವತ್ ಕಾವೇರಪ್ಪ ಇಲ್ಲಿನ ಪ್ರತಿಭೆಗಳು. ಇವರೊಂದಿಗೆ ಹಾಕಿ ರಾಷ್ಟಿçÃಯ ತರಬೇತಿ ಶಿಬಿರಕ್ಕೆ ಪ್ರವೇಶ ಪಡೆದುಕೊಂಡಿರುವ ಕುಪ್ಪಂಡ ಸೋಮಯ್ಯ, ಐನಂಡ ಪೂವಣ್ಣ, ಕುಪ್ಪಂಡ ಭವಿನ್ ಕುಶಾಲಪ್ಪ, ಚೆಪ್ಪುಡೀರ ಚೇತನ್ ಚಿಣ್ಣಪ್ಪ ರಾಷ್ಟಿçÃಯ ತಂಡದ ಕದ ತಟ್ಟುವ ಹಂತದಲ್ಲಿದ್ದಾರೆ. ರಾಷ್ಟçಮಟ್ಟದ ಆಥ್ಲೆಟಿಕ್ನಲ್ಲಿ ತೀತರಮಾಡ ಸಿಂಚಲ್ ಕಾವೇರಮ್ಮ ಸಾಧನೆ ಮಾಡಿದ್ದಾರೆ.
ಕ್ರೀಡೆಯೊಂದಿಗೆ ಅಧಿಕಾರಿ, ವೈದ್ಯ ವೃತ್ತಿ, ಸೇನೆಯಲ್ಲಿ ಕೂಡ ಇಲ್ಲಿನ ವಿದ್ಯಾರ್ಥಿಗಳು ಗಮನ ಸೆಳೆದಿದ್ದಾರೆ. ಐಎಎಸ್ ಅಧಿಕಾರಿ ಡಾ. ಕೊಟ್ಟಂಗಡ ಡಿ. ಪೆಮ್ಮಯ್ಯ, ಡಾ. ಪ್ರಿಯದರ್ಶಿನಿ, ಡಾ. ಗೀತಾಂಜಲಿ, ಡಾ. ಸೋಮಣ್ಣ ಇಲ್ಲಿನ ವಿದ್ಯಾರ್ಥಿಗಳು.
ಸಾಮಾಜಿಕ ಕಳಕಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಜಿಲ್ಲೆಯಲ್ಲಿ ನಡೆದ ಭೂಕುಸಿತದಲ್ಲಿ ಮನೆ ಕಳೆದುಕೊಂಡ ಮೂವರಿಗೆ ಉಚಿತವಾಗಿ ಮನೆ ನಿರ್ಮಿಸಿ ಮಾನವೀಯತೆ ಮೆರೆದಿದೆ. ದಕ್ಷಿಣ ಕೊಡಗು ಭಾಗದಲ್ಲಿ ೨೦ಕ್ಕೂ ಹೆಚ್ಚು ಶಾಲೆಗಳಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಟ್ಟಿದೆ. ಮೂತ್ರಪಿಂಡ ಸಮಸ್ಯೆ ರೋಗಿಗಳು ಡಯಾಲಿಸಿಸ್ ಯಂತ್ರಕ್ಕೆ ಹೊರ ಜಿಲ್ಲೆಯ ಆಸ್ಪತ್ರೆ ಅವಲಂಬಿಸುವ ಅನಿವಾರ್ಯತೆ ಎದುರಿಸುತ್ತಿದ್ದಾಗ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸಾರ್ವಜನಿಕರಿಗೆ ಪ್ರಯೋಜನ ವಾಗುವಂತೆ ಗೋಣಿಕೊಪ್ಪ ಲೋಪಮುದ್ರ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ನೀಡಲಾಗಿದೆ. ಪ್ರಸ್ತುತ ೫ ಯಂತ್ರಗಳು ರೋಗಿಗಳ ಆರೋಗ್ಯ ಕಾಪಾಡುತ್ತಿವೆ.
ಕೊಳೆಯದಂತೆ ಶವ ಕಾಪಾಡಿಕೊಳ್ಳಲು ಬೇಕಾದ ಫ್ರೀಸರ್ ಶವಪೆಟ್ಟಿಗೆ ಕೂಡ ಇವರ ಸೇವೆಯಲ್ಲಿದೆ. ಸೌದೆೆ ಬಳಸಿ ಶವ ಸುಡಲು ತೊಂದರೆ ಎದುರಿಸುತ್ತಿರುವವರು, ಸ್ಮಶಾನ ಇಲ್ಲದವರಿಗೆ ಸಿಲಿಂಡರ್ ಗ್ಯಾಸ್ ಮೂಲಕ ಶವ ಸುಡುವ ಯಂತ್ರ ಸೇವೆ ನೀಡಲಾಗುತ್ತಿದೆ. ಸಾರ್ವಜನಿಕರ ಸಮಸ್ಯೆ ಅರಿತು ಸ್ಪಂದಿಸುವ ಸಂಸ್ಥೆಯಾಗಿ ಬೆಳೆದು ನಿಂತಿದೆ. ೭೧ ಸದಸ್ಯರು ಒಟ್ಟಾಗಿ ತೊಡಗಿಕೊಂಡಿದ್ದಾರೆ.
ಸಂಸ್ಥೆಯ ಪರಿಚಯ : ೧೯೭೩ ರಲ್ಲಿ ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಸ್ತಿತ್ವಕ್ಕೆ ಬಂತು. ಕಾಳಪಂಡ ಬಿ. ವಿಶ್ವನಾಥ್ ಸ್ಥಾಪಕ ಅಧ್ಯಕ್ಷರಾಗಿ, ಇವರೊಂದಿಗೆ ಚೆಪ್ಪುಡೀರ ಎ ಮುತ್ತಣ್ಣ, ಮಾಪಂಗಡ ಎನ್. ಪೂವಯ್ಯ, ಮನೆಯಪಂಡ ಟಿ. ಸುಬ್ಬಯ್ಯ, ಪುತ್ತಾಮನೆ ಎಂ. ಶ್ರೀನಿವಾಸ್ ಜವಬ್ದಾರಿ ನಿಭಾಯಿಸಿದರು. ೧೯೮೧ ರಲ್ಲಿ ಜಾಗ ಖರೀದಿಸಿ ಲಯನ್ಸ್ ಶಾಲೆ ಆರಂಭಿಸಲಾಯಿತು. ಸದಸ್ಯರು ತಲಾ ೧೦ ಸಾವಿರ ಹಣ ಹಾಕಿ ಶಾಲೆ ನಿರ್ಮಾಣ ಆರಂಭಿಸಿದರು. ಚೆಪ್ಪುಡೀರ ಎ ಮುತ್ತಣ್ಣ, ಮನೆಯಪಂಡ ಎ ಮುತ್ತಣ್ಣ, ರಾಮಕೃಷ್ಣ ಉಡುಪ, ಕೆ.ಎಸ್. ತಿಮ್ಮಯ್ಯ, ಮನೆಯಪಂಡ ಟಿ. ಸುಬ್ಬಯ್ಯ, ಕೆ.ಸಿ. ಮಂದಣ್ಣ ಹಾಗೂ ಹಲವು ಹಿರಿಯ ಸದಸ್ಯರ ಚಿಂತನೆಯಲ್ಲಿ ನಂತರ ಕೈಕೇರಿ ಮತ್ತು ಕಳತ್ಮಾಡ್ ಗ್ರಾಮದಲ್ಲಿ ಲಯನ್ಸ್ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ, ಕಾಲೇಜು ಶಿಕ್ಷಣ ನೀಡುತ್ತಿದೆ. ನಂತರ ೧೫ ಎಕರೆ ಜಾಗವನ್ನು ಖರೀದಿಸಿ ಪಿಯುಸಿ ಶಿಕ್ಷಣಕ್ಕೆ ವಿಸ್ತರಿಸಲಾಯಿತು. ೪೨ ವರ್ಷಗಳಿಂದ ಶಿಕ್ಷಣ ಸೇವೆ ನೀಡುತ್ತಿದ್ದು, ಸುಮಾರು ೨೦ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದಿದ್ದಾರೆ.
ಇಂದು ಉದ್ಘಾಟನೆ: ತಾ. ೧೦ ರಂದು (ಇಂದು) ಮಧ್ಯಾಹ್ನ ೨ ಗಂಟೆಗೆ ಲಯನ್ಸ್ ಜಿಲ್ಲಾ ಗವರ್ನರ್ ಸಂಜೀತ್ ಶೆಟ್ಟಿ ಉದ್ಘಾಟಿಸಲಿದ್ದಾರೆ.