ಮಡಿಕೇರಿ, ಮಾ. ೯: ಶ್ರೀಮಂಗಲ ನಾಡ್ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಮಹಿಳಾ ದಿನದ ಸಂಭ್ರಮ ನಡೆಯಿತು.
ಸಮಾಜದ ಆವರಣದಲ್ಲಿ ಅಧ್ಯಕ್ಷೆ ನೆಲ್ಲೀರ ನೀನಾ ಪೂಣಚ್ಚ ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು. ಈ ಸಂದರ್ಭ ವಿವಿಧ ಕ್ರೀಡಾ ಸ್ಪರ್ಧೆಗಳು, ಸನ್ಮಾನ ಸಮಾರಂಭ ನಡೆಯಿತು. ಟಿ. ಶೆಟ್ಟಿಗೇರಿ ಗ್ರಾ.ಪಂ.ನ ಆಶಾ ಕಾರ್ಯಕರ್ತೆ ವೀಣಾ ಹಾಗೂ ಶ್ರೀಮಂಗಲ ಗ್ರಾ.ಪಂ.ನ ಸ್ವಚ್ಛತಾ ಸಿಬ್ಬಂದಿ ಸಿಂಧುಕುಮಾರಿ ಅವರುಗಳನ್ನು ಸನ್ಮಾನಿಸಲಾಯಿತು.