ಕುಶಾಲನಗರ, ಮಾ. ೯: ಕೊಡಗು ಪ್ರೆಸ್ಕ್ಲಬ್ ಬೆಳ್ಳಿ ಮಹೋತ್ಸವ ಅಂಗವಾಗಿ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಆಶ್ರಯದಲ್ಲಿ ಬೆಳ್ಳಿ ಮಹೋತ್ಸವ ಸಾಂಸ್ಕೃತಿಕ ಸಮಿತಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕುಶಾಲನಗರದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಮಡಿಕೇರಿಯ ರೂಪಾ ಸತೀಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಮಾಜಕ್ಕೆ, ತುಂಬಿದ ಕುಟುಂಬಕ್ಕೆ ತಾಯಂದಿರ ಕೊಡುಗೆ ಅಪಾರ. ಎಲ್ಲಾ ಕ್ಷೇತ್ರದಲ್ಲಿ ಮಹಿಳೆ ತನ್ನ ಛಾಪು ಮೂಡಿಸುತ್ತಿದ್ದಾಳೆ. ಕುಟುಂಬದ ಆರೈಕೆ ನಡುವೆ ದೊರೆಯುವ ಬಿಡುವನ್ನು ಉತ್ತಮ ಹವ್ಯಾಸಗಳಿಗೆ ಮೀಸಲಿಡುವ ಮೂಲಕ ಆರೋಗ್ಯಯುತ ಬದುಕಿಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು. ಸಾಧನೆಗೆ ಅಡ್ಡಿ ಎಂಬುದು ಯಾವುದು ಇಲ್ಲ. ದೃಢ ಮನಸ್ಸಿನ ಸಂಕಲ್ಪ, ನಿರಂತರ ಅಧ್ಯಯನ, ಪ್ರಯತ್ನಗಳು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ ಎಂದು ಸಲಹೆ ನೀಡಿದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ಕೂಡಿಗೆ ಕ್ರೀಡಾಶಾಲೆ ನಿವೃತ್ತ ಮುಖ್ಯ ಶಿಕ್ಷಕಿ ಕುಂತಿ ಬೋಪಯ್ಯ ಮಾತನಾಡಿ, ಹೆಣ್ಣೆಂದರೆ ಒಂದು ಶಕ್ತಿಯ ರೂಪ. ಬಹುಮುಖ ಪಾತ್ರಗಳನ್ನು ವಹಿಸುವ ಮೂಲಕ ಕುಟುಂಬ, ಕಚೇರಿಗಳಲ್ಲಿ ತಮ್ಮ ಜವಾಬ್ದಾರಿ ಸಮರ್ಪಕವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಮಹಿಳೆಯರಿಂದ ಹಲವು ಚರಿತ್ರೆ ಸೃಷ್ಟಿಯಾದ ಉದಾಹರಣೆಗಳಿವೆ ಎಂದರು.
ಮಹಿಳಾ ಸಬಲೀಕರಣಕ್ಕೆ ಸರಕಾರ ನೀಡಿರುವ ಸೌಲಭ್ಯ, ಯೋಜನೆಗಳನ್ನು ಅರಿತುಕೊಂಡು ಸದುಪಯೋಗಪಡಿಸಿಕೊಂಡು ಮುಖ್ಯವಾಹಿನಿಗೆ ಬರುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ಹೆಣ್ಣಿಗೆ ಹೆಣ್ಣು ಶತ್ರು ಎಂಬ ಗಾದೆಗೆ ವಿರುದ್ಧವಾಗಿ ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರು ಸಂಘಟಿತರಾಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಸ್ತಿçÃ-ಪುರುಷ ಎಂಬ ಬೇದಭಾವ ಇಲ್ಲದ ಸಮಾಜ ಇಂದು ಕಂಡುಬರುತ್ತಿರುವುದು ಪ್ರಶಂಸನೀಯ ವಿಚಾರ ಎಂದರು.
ಶಿವಮೊಗ್ಗದ ಪಾರಂಪರಿಕ ನಾಟಿ ವೈದ್ಯೆ ಸುಮನ ಮಳಲಗದ್ದೆ ಮಹಿಳೆಯರ ಆರೋಗ್ಯ ಸಂಬAಧಿಸಿದ ವಿಚಾರಗಳ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮ ಸಂಚಾಲಕ ರಾದ ಕುಶಾಲನಗರದ ವನಿತಾ ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕುಶಾಲನಗರದ ಪ್ರಿಯಾಂಕ ಗಂಗಾಧರಪ್ಪ, ರೇಖಾ ಗಣೇಶ್, ಪ್ರಜ್ಞಾ ರಾಜೇಂದ್ರ ಮತ್ತಿತರರು ಇದ್ದರು.
ವೇದಿಕೆ ಕಾರ್ಯಕ್ರಮದ ಬಳಿಕ ಪತ್ರಕರ್ತರ ಕುಟುಂಬ ಸೇರಿದಂತೆ ಕುಶಾಲನಗರದ ತಿರುಪತಿ ತಿರುಮಲ ಮಹಿಳಾ ಭಜನಾ ಮಂಡಳಿ, ಕೊಡವ ಗೌಡ ಮತ್ತಿತರ ಮಹಿಳಾ ಸಂಘಟನೆಗಳ ತಂಡದಿAದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನೆರೆದಿದ್ದವರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಚಲನಚಿತ್ರ ನಟಿ ಸಿಂಚನ ಚಂದ್ರಮೋಹನ್ ನಡೆಸಿದರು.
ಸಮಾರೋಪ
ಕೊಡಗು ಪ್ರೆಸ್ಕ್ಲಬ್ ಬೆಳ್ಳಿ ಮಹೋತ್ಸವ ಅಂಗವಾಗಿ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಆಶ್ರಯದಲ್ಲಿ ಬೆಳ್ಳಿ ಮಹೋತ್ಸವ ಸಾಂಸ್ಕೃತಿಕ ಸಮಿತಿ, ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಮತ್ತು ಕುಶಾಲನಗರ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕುಶಾಲನಗರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು. ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಮಹಾ ಪೋಷಕ ಜಿ. ರಾಜೇಂದ್ರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇಂದಿನ ಆಧುನಿಕ ಕಾಲಘಟ್ಟದಲ್ಲಿ ಮಹಿಳೆ ಸಶಕ್ತಳಾಗಿದ್ದಾಳೆ. ಭಾರತದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ದೊರೆಯುತ್ತಿದೆ ಎಂದ ಅವರು, ಮಹಿಳೆಯರ ಸೌಂದರ್ಯ ಆರಾಧಿ ಸುವಂತಾಗಬೇಕು. ಆದರೆ ಸೌಂದರ್ಯ ಭಗ್ನಗೊಳಿಸುವ ಕಾರ್ಯ ವಿಷಾದನೀಯ ಬೆಳವಣಿಗೆ ಎಂದರು. ಕೊಡಗು ಪ್ರೆಸ್ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಬೆಳ್ಳಿ ಮಹೋತ್ಸವದ ಅಂಗವಾಗಿ ವಿವಿಧ ರೀತಿಯ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ. ಜನಮಾನಸಕ್ಕೆ ತಲುಪು ವಂತಹ ವೈವಿಧ್ಯಮಯ ಕಾರ್ಯಕ್ರಮ ವಿವಿಧೆಡೆ ಜರುಗುತ್ತಿವೆ ಎಂದರು. ಸಮಾನತೆಯ ಉದ್ದೇಶಕ್ಕಾಗಿ ಆರಂಭ ವಾದ ಮಹಿಳಾ ದಿನಾಚರಣೆ ಪುರುಷ ದ್ವೇಶಿ ಕಾರ್ಯಕ್ರಮ ವಾಗಬಾರದು. ಮಕ್ಕಳನ್ನು ಸುಸಂಸ್ಕೃತ ರಾಗಿಸುವ ನಿಟ್ಟಿನಲ್ಲಿ ಪೋಷಕರು ಮುಖ್ಯ ಪಾತ್ರ ವಹಿಸಬೇಕು ಎಂದರು. ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಡಾ. ಉಳ್ಳಿಯಡ ಎಂ. ಪೂವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳ್ಳಿ ಹಬ್ಬ ಆಚರಣೆ ಸಂಬAಧ ಕೈಗೊಂಡಿರುವ ವಿವಿಧ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ, ದಿನದ ಶುಭಾಶಯ ಕೋರಿದರು.
ಸೋಮವಾರಪೇಟೆ ಅಬಕಾರಿ ಡಿವೈಎಸ್ಪಿ ಚೈತ್ರಾ, ಜಿ.ಪಂ. ಮಾಜಿ ಸದಸ್ಯೆ ಕೆ.ಪಿ. ಚಂದ್ರಕಲಾ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತ ನಾಡಿದರು. ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರು ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ, ಕಾರ್ಯಕ್ರಮ ಸಂಚಾಲಕಿ ವನಿತಾ ಚಂದ್ರಮೋಹನ್ ಸೇರಿದಂತೆ ಕೊಡಗು ಜಿಲ್ಲೆ ಹಾಗೂ ಕುಶಾಲ ನಗರ ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳು, ಕೊಡಗು ಪ್ರೆಸ್ಕ್ಲಬ್ ಆಡಳಿತ ಮಂಡಳಿ ಸದಸ್ಯರು ಸದಸ್ಯರು ಇದ್ದರು.