ಮಡಿಕೇರಿ, ಮಾ. ೯: ಮಡಿಕೇರಿಯ ಸಂತ ಜೋಸೆಫೆರ ಶಾಲೆಯಲ್ಲಿ ಎಲ್ಕೆಜಿಯಲ್ಲಿ ವ್ಯಾಸಂಗ ಮಾಡುತ್ತಿರುವ ೪ ವರ್ಷ ೩ ತಿಂಗಳು ಪ್ರಾಯದ ಕೆ.ಎಸ್. ಜಾಗೃತಿ ೫೪ ಸೆಕೆಂಡ್ಗಳಲ್ಲಿ ೯೦ ದೇಶಗಳ ಹೆಸರನ್ನು ಹೇಳಿ ‘ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿ ಮಾನ್ಯತೆ ಪಡೆದಿರುತ್ತಾಳೆ.
ಇವಳು ಮಡಿಕೇರಿ ನಿವಾಸಿ ಕೆಂಜನ ಸುಧನ್ವ ಹಾಗೂ ಡಾ. ಪೂಜಾ ಅವರ ಪುತ್ರಿ.