ನಾಪೋಕ್ಲು, ಮಾ. ೭: ಸಮೀಪದ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವ ಸನ್ನಿಧಿಯಲ್ಲಿ ಕುಂಬ್ಯಾರು ಕಲಾಡ್ಚ ವಾರ್ಷಿಕೋತ್ಸವವು ವಿಜೃಂಭಣೆ ಯಿಂದ ನೆರವೇರಿತು.

ಮಂಗಳವಾರ ಬೆಳಿಗ್ಗೆ ದೇವತಕ್ಕರಾದ ಪರದಂಡ ಕುಟುಂಬಸ್ಥರ ಐನ್ ಮನೆಯಿಂದ ಆಗಮಿಸಿದ ಎತ್ತು ಪೋರಾಟ ಮತ್ತು ಬಲಿವಾಡುವಿನ ಆಗಮನದೊಂದಿಗೆ ದೇವಳದಲ್ಲಿ ಉತ್ಸವ ಆರಂಭ ಗೊಂಡಿತು. ಅದರೊಂದಿಗೆ ಇನ್ನಿತರ ತಕ್ಕಮುಖ್ಯಸ್ಥರ ಎತ್ತುಪೋರಾಟ, ಸೇವೆಗಳೂ ಸಂಪ್ರದಾಯದAತೆ ನಡೆಯಿತು.

ನಂತರ ಭಕ್ತರ ತುಲಾಭಾರ ಸೇವೆಗಳು, ಮಧ್ಯಾಹ್ನದ ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಿತು.

ಅಪರಾಹ್ನ ಇಗ್ಗುತ್ತಪ್ಪ ದೇವರ ಉತ್ಸವ ಮೂರ್ತಿಯ ದರ್ಶನ. ಬಳಿಕ ಮೂರು ಕಿ.ಮೀ. ದೂರದ ಆದಿ ಸ್ಥಳ ಮಲ್ಮ ಬೆಟ್ಟಕ್ಕೆ ಉತ್ಸವ ಮೂರ್ತಿಯೊಂದಿಗೆ ತಕ್ಕ ಮುಖ್ಯಸ್ಥರು, ಭಕ್ತಾದಿಗಳು ವಾದ್ಯಘೋಷಗಳೊಂದಿಗೆ ತೆರಳಿದರು.

ಈ ಸಂದರ್ಭ ಸಮೀಪದ ನೆಲಜಿ ಇಗ್ಗುತ್ತಪ್ಪ ದೇವಾಲಯದ ತಕ್ಕಮುಖ್ಯಸ್ಥರು, ಹಾಗೂ ಪೇರೂರು ಇಗ್ಗುತ್ತಪ್ಪ ದೇವಾಲಯದ ತಕ್ಕಮುಖ್ಯಸ್ಥರು,

(ಮೊದಲ ಪುಟದಿಂದ) ಭಕ್ತಾದಿಗಳು ಎತ್ತಪೋರಾಟದೊಂದಿಗೆ ಮಲ್ಮ ಬೆಟ್ಟದಲ್ಲಿ ಹಾಜರಿದ್ದರು. ಮೂರು ಇಗ್ಗುತ್ತಪ್ಪ ದೇವಾಲಯಗಳ ತಕ್ಕ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಇಗ್ಗುತ್ತಪ್ಪ ದೇವರ ಆದಿ ಸ್ಥಳ ಮಲ್ಮದಲ್ಲಿ ದೈವಿಕ ವಿಧಿವಿಧಾನಗಳನ್ನು ನೆರವೇರಿಸಿ ದೇವ ಕಟ್ಟನ್ನು ಹಿಂತೆಗೆಯಲಾಯಿತು. ನಂತರ ದೇವರಿಗೆ ನೈವೇದ್ಯ, ಪೂಜೆ, ಮತ್ತಿತರ ಧಾರ್ಮಿಕ ಕಾರ್ಯಗಳೊಂದಿಗೆ ಪ್ರಸಾದ ವಿತರಣೆ ನಡೆಯಿತು. ಎಲ್ಲಾ ಕಾರ್ಯಕ್ರಮಗಳು ಮುಗಿದ ನಂತರ ದೇವಳಕ್ಕೆ ಹಿಂತಿರುಗಿ, ರಾತ್ರಿ ದೇವಾಲಯದಲ್ಲಿ ನಡೆದ ಉತ್ಸವ ಮೂರ್ತಿಯ ಆಕರ್ಷಕ ನೃತ್ಯೋತ್ಸವದೊಂದಿಗೆ ಒಂದು ದಿನದ ವಾರ್ಷಿಕೋತ್ಸವ ಸಂಪನ್ನಗೊAಡಿತು.

ದೈವಿಕ ವಿಧಿವಿಧಾನಗಳನ್ನು ದೇವಳದ ಪ್ರಧಾನ ಅರ್ಚಕರಾದ ವೇದÀ ಮೂರ್ತಿ ಕುಶ ಭಟ್, ಸಹಾಯಕರಾದ ದೇವಿ ಪ್ರಸಾದ್, ಶ್ರೀನಿವಾಸ ಹೆಬ್ಬಾರ್, ಶ್ರೀಕಾಂತ ಹೆಬ್ಬಾರ್ ಮತ್ತಿತರರು ನೆರವೇರಿಸಿದರು.

ಉತ್ಸವದಲ್ಲಿ ದೇವಳಕ್ಕೆ ಸಂಬAಧಿಸಿದ ಎಲ್ಲಾ ತಕ್ಕ ಮುಖ್ಯಸ್ಥರು, ಪಾಡಿ ಶ್ರೀ ಇಗ್ಗುತ್ತಪ್ಪ ಭಕ್ತ ಜನಸಂಘದ ಅಧ್ಯಕ್ಷ ಕಾಂಡAಡ ಜೋಯಪ್ಪ, ಕಾರ್ಯದರ್ಶಿ ಬೊಳದಂಡ ಲಲಿತಾ ನಂದಕುಮಾರ್, ಉಪಾಧ್ಯಕ್ಷ ಪರದಂಡ ಡಾಲಿ, ಖಜಾಂಚಿ ನಂಬಡಮAಡ ಸುಬ್ರಮಣಿ, ದೇವಳ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ಭಕ್ತ ಜನಸಂಘದ ಆಡಳಿತ ಮಂಡಳಿ ಸದಸ್ಯರು, ನಾಪೋಕ್ಲು ಹೋಬಳಿ ಕಂದಾಯ ಪರಿವೀಕ್ಷಕ ರವಿಕುಮಾರ್, ದೇವಳದ ಪಾರುಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಪ್ಪ, ಭಕ್ತಜನಸಂಘದ ವ್ಯವಸ್ಥಾಪಕ ಕಂಬೆಯAಡ ಬೊಳ್ಳಪ್ಪ, ಭಕ್ತಾದಿಗಳು ಹಾಜರಿದ್ದರು.

ನೆಲಜಿ ಇಗ್ಗುತ್ತಪ್ಪ ದೇವಳದಲ್ಲಿ : ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ನಡೆದಂತೆ ಸಮೀಪದ ನೆಲಜಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿಯೂ ಕುಂಬ್ಯಾರು ಕಲಾಡ್ಚ ವಾರ್ಷಿಕೋತ್ಸವ ನಡೆಯಿತು. ಭಕ್ತರು ತಲಾಭಾರ ಸೇವೆ ಸೇರಿದಂತೆ ಮಹಾಪೂಜೆ ಮತ್ತಿತರ ಸೇವೆಗಳನ್ನು ನೆರವೇರಿಸಿದರು. ಹಲವಾರು ಭಕ್ತರು ತಾವು ಬೆಳೆದ ಕಾಫಿ, ಕಾಳುಮೆಣಸು, ಅಕ್ಕಿ ಮತ್ತಿತರ ವಸ್ತುಗಳನ್ನು ದೇವಳಕ್ಕೆ ಕಾಣಿಕೆಯಾಗಿ ನೀಡಿದರು.

ಮಧ್ಯಾಹ್ನ ಅನ್ನ ಸಂತರ್ಪಣೆಯ ಬಳಿಕ ದೇವರ ಬಲಿ, ನೃತ್ಯ ಬಲಿ ನಡೆಯಿತು. ತಕ್ಕ ಮುಖ್ಯಸ್ಥರು, ಗ್ರಾಮಸ್ಥರು ಸೇರಿದಂತೆ ಹೆಚ್ಚಿನ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ದೈವಿಕ ವಿಧಿವಿಧಾನಗಳನ್ನು ವೇದ ಮೂರ್ತಿಗಳಾದ ಸಂತೋಷ್ ಹೆಬ್ಬಾರ್, ರಮೇಶ್ ಶರ್ಮ, ಸುರೇಶ್ ಶರ್ಮ ಮತ್ತಿತರರು ನೆರವೇರಿಸಿದರು.

-ಪಿ.ವಿ.ಪ್ರಭಾಕರ್