ವೀರಾಜಪೇಟೆ, ಮಾ. ೭: ಜಾನಪದ ಪ್ರಕಾರಗಳಲ್ಲಿ ಒಂದಾಗಿರುವ ಉರುಟಿಕೊಟ್ಟ್ ಆಟ್ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ತೋರ ಗ್ರಾಮದ ಕುಡಿಯರ ಶಾರದಾ ಅವರಿಗೆ ಲಕ್ಷö್ಮಮ್ಮ ಎಚ್.ಎಲ್. ನಾಗೇಗೌಡ ಜಾನಪದ ಲೋಕ ಪ್ರಶಸ್ತಿ ಲಭಿಸಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಪ್ರಶಸ್ತಿ ಪ್ರದಾನ ಮಾಡಿದರು.