ಸೋಮವಾರಪೇಟೆ, ಮಾ. ೭: ಇಲ್ಲಿನ ಒಕ್ಕಲಿಗರ ಯುವ ವೇದಿಕೆಯ ನೇತೃತ್ವದಲ್ಲಿ ಅಮೇಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಮತ್ತು ಕೊಡಗು ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ರಾಷ್ಟçಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಅಮೋಘ ಆಟ ಪ್ರದರ್ಶಿಸಿದ ಹೈದರಾಬಾದ್ನ ಸೌತ್ ಸೆಂಟ್ರಲ್ ರೈಲ್ವೆ ತಂಡ ಪ್ರಥಮ ಸ್ಥಾನದೊಂದಿಗೆ ಪ್ರತಿಷ್ಠಿತ ಒಕ್ಕಲಿಗರ ಕಪ್ನ್ನು ತನ್ನ ಮುಡಿಗೇರಿಸಿಕೊಂಡಿತು.
ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ರಾಷ್ಟç ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಎದುರಾಳಿ ಕರ್ನಾಟಕ ತಂಡವನ್ನು ಮಣಿಸಿ ಆಕರ್ಷಕ ಟ್ರೋಫಿಯೊಂದಿಗೆ ರೂ. ೨ ಲಕ್ಷ ನಗದು ಬಹುಮಾನಕ್ಕೆ ಹೈದರಾಬಾದ್ ತಂಡ ಪಾತ್ರವಾಯಿತು.
೧೦ ಸಾವಿರಕ್ಕೂ ಅಧಿಕ ಕಬಡ್ಡಿ ಪ್ರೇಮಿಗಳು ನೆರೆದಿದ್ದ ಪಂದ್ಯಾಟವು ತಡರಾತ್ರಿಯವರೆಗೂ ನಡೆಯಿತು. ಪ್ರೇಕ್ಷಕರ ಚಪ್ಪಾಳೆ, ಶಿಳ್ಳೆಯ ಪ್ರೋತ್ಸಾಹದ ನಡುವೆಯೂ ಕರ್ನಾಟಕ ತಂಡ ಹೈದರಾಬಾದ್ನ ಎದುರು ಸೋಲೊಪ್ಪಿಕೊಂಡು ರೂ. ೧ ಲಕ್ಷ ನಗದಿನೊಂದಿಗೆ ಆಕರ್ಷಕ ಟ್ರೋಫಿಗೆ ತೃಪ್ತಿಪಟ್ಟುಕೊಂಡಿತು.
ರೋಚಕ ಫೈನಲ್ ಹಣಾಹಣಿಯಲ್ಲಿ ೪೪-೩೦ ಅಂಕಗಳಲ್ಲಿ ಗೆಲುವು ಸಾಧಿಸಿದ ಹೈದರಾಬಾದ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಮೂರನೇ ಬಹುಮಾನವನ್ನು ಮುಂಬೈ ಯುವ ಪಲ್ಟನ್, ಚತುರ್ಥ ಬಹುಮಾನವನ್ನು ಹರಿಯಾಣ ತಂಡ ಪಡೆಯಿತು.
ಮೊದಲ ಕ್ವಾರ್ಟರ್ ಫೈನಲ್ನಲ್ಲಿ ಬಲಿಷ್ಠ ಬ್ಯಾಂಕ್ ಆಫ್ ಬರೋಡ ತಂಡವನ್ನು, ಮುಂಬೈನ ಯುವ ಪಲ್ಟನ್ ತಂಡ ೩೬-೩೨ ಅಂಕಗಳಿAದ ಸೋಲಿಸಿ ಸೆಮಿಫೈನಲ್ಗೇರಿತು.
ಸೌತ್ಸೆಂಟ್ರಲ್ ರೈಲ್ವೇ ತಂಡ, ಏರ್ಇಂಡಿಯಾ ತಂಡದ ವಿರುದ್ಧ ೩೮-೧೬ರಲ್ಲಿ ಗೆಲುವು ದಾಖಲಿಸಿತು. ರ್ಯಾಣ ಎನ್ಯುಎಸ್ಸಿ ತಂಡ, ತಮಿಳುನಾಡಿನ ದೊರೆ ಸಿಂಗA ತಂಡವನ್ನು ೪೨-೩೫ ಅಂಕಗಳಿAದ ಮಣಿಸಿತು. ಕರ್ನಾಟಕ ಇಲೆವೆನ್ ತಂಡ, ಕರ್ನಾಟಕ ರಾಜ್ಯ ಪೊಲೀಸ್ ತಂಡವನ್ನು ೩೪-೨೫ ಅಂಕಗಳಿAದ ಸೋಲಿಸಿತು.
ಮೊದಲ ಸೆಮಿಫೈನಲ್ನಲ್ಲಿ ಕರ್ನಾಟಕ ಇಲೆವೆನ್ ತಂಡ, ಮುಂಬೈ ಯುವ ಪಲ್ಟನ್ ತಂಡವನ್ನು ೩೦-೨೯ ಅಂಕಗಳಿAದ ಸೋಲಿಸಿ ಫೈನಲ್ಗೇರಿತು. ಎರಡನೇ ಸೇಮಿಸ್ ನಲ್ಲಿ ರ್ಯಾಣ ಎನ್ಯುಎಸ್ಸಿ ತಂಡವನ್ನು ಸೌತ್ಸೆಂಟ್ರಲ್ ರೈಲ್ವೆ ತಂಡ ೩೮-೧೯ ಸೋಲಿಸಿ ಫೈನಲ್ ಗೇರಿತು.
ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್, ಮಾಜಿ ಸಚಿವ ಬಿ.ಎ.ಜೀವಿಜಯ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ.ಚAಗಪ್ಪ, ತಾಲೂಕು ಅಧ್ಯಕ್ಷ ಎ.ಆರ್.ಮುತ್ತಣ್ಣ, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಕೆ.ಬಿ. ಸುರೇಶ್, ರಾಜ್ಯ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಬಿ.ಸಿ. ಸುರೇಶ್, ಜಿಲ್ಲಾ ಅಧ್ಯಕ್ಷ ಎಚ್.ಎಸ್. ಉತ್ತಪ್ಪ ಪ್ರಮುಖರಾದ ಡಾ. ಮಂತರ್ಗೌಡ, ಹರೀಶ್ಗೌಡ, ಎಸ್.ಜಿ. ಮೇದಪ್ಪ, ಬಿ.ಜೆ. ದೀಪಕ್, ಅರುಣ್ ಕೊತ್ನಳ್ಳಿ, ಗಿರೀಶ್ ಮಲ್ಲಪ್ಪ, ಶುಂಠಿ ನಾಗಭೂಷಣ್, ಕಿರಣ್ ಕೊತ್ನಳ್ಳಿ, ಪಿ.ಕೆ.ರವಿ ಮತ್ತಿತರರು ಸಮಾರೋಪ ಸಮಾರಂಭದಲ್ಲಿ ಇದ್ದರು.
ಅಂತರರಾಷ್ಟಿçÃಯ ಕಬಡ್ಡಿ ಆಟಗಾರ ಹಾಗೂ ಏಕಲವ್ಯ ಪ್ರಶಸ್ತಿ ಪುರಸ್ಕೃತ ಬಿ.ಸಿ. ಸುರೇಶ್, ಕಿರಿಯ ಹಾಕಿ ಆಟಗಾರರಾದ ಹಾನಗಲ್ಲು ಗ್ರಾಮದ ಕೆ.ಸಿ. ಭುವನ್, ಹೆಗ್ಗುಳ ಗ್ರಾಮದ ವಿ.ವೈ. ಶಶಿತ್ ಅವರುಗಳನ್ನು ಸನ್ಮಾನಿಸಲಾಯಿತು.