ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆ

ಅನೇಕ ಬದಲಾವಣೆಗಳು ಮಹಿಳೆಯರ ಬದುಕಿನಲ್ಲಿ ಆಗುತ್ತಲೇ ಇವೆ. ಮಹಿಳೆಯರಿಗೆ ನೀಡಿದ ಸ್ವಾತಂತ್ರö್ಯದಿAದಾಗಿ ತನ್ನನ್ನು ತಾನು ಹೊರ ಜಗತ್ತಿಗೆ ತೆರೆದುಕೊಂಡಿದ್ದಾಳೆ. ಈ ಸ್ವಾತಂತ್ರö್ಯವನ್ನು ಆಕೆ ಬದುಕಿಗಾಗಿ ಹೋರಾಡಿ ಪಡೆದುಕೊಂಡಿದ್ದಾಗಿದೆ.

೧೯೧೧ ರಲ್ಲಿ ಮತದಾನದ ಹಕ್ಕನ್ನು ಬೇಡಿಕೆಯಾಗಿಟ್ಟುಕೊಂಡು ಮೊದಲ ಬಾರಿ ಅಂರ‍್ರಾಷ್ಟಿçÃಯ ಮಹಿಳಾ ದಿನವನ್ನು ಆಚರಿಸಲಾಯಿತು. ಇದಲ್ಲದೆ ಮತಚಲಾಯಿಸುವ ಹಕ್ಕು, ಸಾರ್ವಜನಿಕ ಕಚೇರಿ, ಮಹಿಳೆಯರಿಗೆ ಕೆಲಸ ಮಾಡುವ ಹಕ್ಕು ಹಾಗೂ ಉದ್ಯೋಗ ತರಬೇತಿಯನ್ನು ಜಾರಿಗೆ ತರಲು ಬೇಡಿಕೆ ಇಟ್ಟಿದ್ದಲ್ಲದೆ ಕೆಲಸದಲ್ಲಿನ ತಾರತಮ್ಯವನ್ನು ವಿರೋಧಿಸಿ ಪ್ರತಿಭಟಿಸಿದರು. ೧೯೧೩-೧೯೧೪ ಅಂರ‍್ರಾಷ್ಟಿçÃಯ ಮಹಿಳಾ ದಿನದ ಆಚರಣೆ. ೧ನೇ ವಿಶ್ವ ಯುದ್ಧವನ್ನು ತಡೆಗಟ್ಟುವ ಯಾಂತ್ರಿಕ ಕೌಶಲ್ಯವಾಗಿ ಮಾರ್ಪಟ್ಟಿತು.

ಇಂದು ಹೆಣ್ಣು ಮಕ್ಕಳು, ಮಹಿಳೆಯರಿಗೆ ಸುರಕ್ಷತೆ ಬೇಕಾಗಿದೆ. ತಾನು ಉದ್ಯೋಗ ಮಾಡುತ್ತಿರುವ ಪರಿಸರದಲ್ಲಾಗಲಿ, ತಾನು ಕೈಗೊಳ್ಳುವ ಯಾವುದೇ ವ್ಯವಹಾರ - ವಹಿವಾಟಾಗಲಿ ಸಾಮಾಜಿಕ ರಕ್ಷಣೆ ಬೇಕಾಗಿದೆ. ಆಟೋ ಚಾಲಕಿ ವೃತ್ತಿಯಿಂದ ಹಿಡಿದು ಪೈಲಟ್‌ವರೆಗೆ, ವಿಜ್ಞಾನಿಯಿಂದ ಹಿಡಿದು ಗಗನಯಾತ್ರಿಯಾಗಿ ಬಾಹ್ಯಾಕಾಶಕ್ಕೂ ದಾಪುಗಾಲಿಟ್ಟು ಭಾರತದ ಗಡಿ ಕಾಯುವ ಸೇನೆಯಲ್ಲೂ ತನ್ನನ್ನು ತೊಡಗಿಸಿಕೊಂಡ ಮಹಿಳೆಗೆ ಬೇಕಾಗಿರುವುದು ಸಾಮಾಜಿಕ ಗೌರವ ಹಾಗೂ ರಕ್ಷಣೆ. ಹೆಣ್ಣು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಪ್ರಕರಣ, ಇದಕ್ಕೆ ಸಮಾಜವೇ ಜವಾಬ್ದಾರಿಯಲ್ಲವೇ? ನಮ್ಮ ಗಂಡು ಮಕ್ಕಳನ್ನು ಹೆಣ್ಣು ಮಕ್ಕಳಿಗೆ ಗೌರವ ಕೊಡುವಂತೆ ಬೆಳೆಸುವುದು ನಮ್ಮ ಕರ್ತವ್ಯವಲ್ಲವೆ? ಕಾನೂನು ಕೂಡ ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ತನ್ನ ಪಾಲಿನ ಕರ್ತವ್ಯವನ್ನು ಮುಲಾಜಿಲ್ಲದೆ ನಿಭಾಯಿಸಬೇಕು.

ಹಾಗೆ ಆದಾಗ ಮಾತ್ರ ನಾವು ಆಚರಿಸು ತ್ತಿರುವ ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆಗೆ ಅರ್ಥ ಬಂದೀತು ಅನ್ನುವ ಮನೋಭಾವನೆ ಹೆಚ್ಚು ಹೆಚ್ಚು ಬೆಳೆದು ಸುಖೀ ಬಂಧುತ್ವದ ಸಮಾಜ ನಿರ್ಮಾಣವಾಗಲಿ ಎಂಬುದೇ ಎಲ್ಲಾ ಮಹಿಳೆಯರ ಹಾರೈಕೆ. ಇಂದು ಮಹಿಳೆಯರು ಇಷ್ಟೊಂದು ಪ್ರಗತಿಪಥದತ್ತ ಹೆಜ್ಜೆ ಹಾಕಲು ಪುರುಷರು ಕೂಡ ಕಾರಣ ಎಂಬುದನ್ನು ನಾವು ಮರೆಯುವಂತಿಲ್ಲ.

ಮಹಿಳೆಯನ್ನು ದೇವತೆಗಳ ಸ್ಥಾನದಲ್ಲಿ ನೋಡುವುದೇ ಭಾರತೀಯರ ಸಂಸ್ಕೃತಿ. ಆದರೆ ಸುಸ್ಥಿರ ನಾಳೆಗಾಗಿ ಲಿಂಗ ಸಮಾನತೆ ಬರಲಿ. ಪುರುಷನ ಯಶಸ್ಸಿಗೆ ಸ್ತಿçÃಯೇ ಕಾರಣ ಎಂದರೂ ತಪ್ಪಾಗಲಾರದು. ತಾಯಿ, ತಂಗಿ, ಹೆಂಡತಿ, ಅಕ್ಕ, ಅತ್ತಿಗೆ, ನಾದಿನಿ, ಅತ್ತೆ, ಸಖಿ, ಸ್ನೇಹಿತೆ ಹೀಗೆ ವಿವಿಧ ಪಾತ್ರಗಳಲ್ಲಿ ತನ್ನ ಕುಟುಂಬಕ್ಕಾಗಿ, ಸಮಾಜಕ್ಕಾಗಿ ದುಡಿಯುತ್ತಿರುವ ಮಹಿಳೆಗೆ ಜೈ ಎನ್ನೋಣ.

- ದಂಬೆಕೋಡಿ ಸುಶೀಲಾ ಸುಬ್ರಮಣಿ, ಶಾಸ್ತಿçà ನಗರ, ಮೂರ್ನಾಡು.