ಸುಂಟಿಕೊಪ್ಪ, ಮಾ. ೬: ಸಂಸ್ಕೃತಿ ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಸಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕಲಾ ಪ್ರತಿಭೆಗಳು ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಛಾಪು ಮೂಡಿಸಲು ಫ್ರೆಂಡ್ಸ್ ಯೂತ್ ಕ್ಲಬ್ ವೇದಿಕೆಯಾಗುತ್ತಿದೆ ಎಂದು ಕಾಂಗ್ರೆಸ್ ಕುಶಾಲನಗರ ಬ್ಲಾಕ್ ಅಧ್ಯಕ್ಷ ವಿ.ಪಿ. ಶಶಿಧರ್ ಹೇಳಿದರು.

ನಾಕೂರು ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ ವತಿಯಿಂದ ೨೩ನೇ ವಾರ್ಷಿಕೋತ್ಸವದ ಅಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿನ ಡ್ಯಾನ್ಸ್ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಸ್ಥಳೀಯ ರಾಜ್ಯಮಟ್ಟದ ಮಾಧ್ಯಮಗಳು ಕಲೆ ಹಾಗೂ ಸಂಸ್ಕೃತಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ಕುಗ್ರಾಮಗಳಲ್ಲಿ ಅಡಗಿರುವ ಅದೆಷ್ಟೋ ಕಲಾ ಪ್ರತಿಭೆಗಳನ್ನು ಹುಡುಕಿ ವೇದಿಕೆಯನ್ನು ಒದಗಿಸಿ ಆ ಮೂಲಕ ಅವರುಗಳ ಪ್ರತಿಭೆಯನ್ನು ಅನಾವರಣಗೊಳಿಸಲಾಗುತ್ತಿದೆ.

ಸ್ಥಳೀಯ ಪ್ರತಿಭೆಗಳು ಈ ವೇದಿಕೆಯಿಂದ ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆಯಾಗಬೇಕೆಂದು ಅವರು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಡ್ಯಾನ್ಸ್ ಮೇಳ ಕಾರ್ಯಕ್ರಮದ ದಾನಿಗಳಾದ ಕಾಫಿ ಬೆಳೆಗಾರರಾದ ಅಡಿಕೇರಿ ಧರ್ಮಪ್ಪ ವಹಿಸಿದ್ದರು.

ಸಮಾರಂಭದ ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷ ಮಂದೋಡಿ ಸಿ. ಜಗನ್ನಾಥ್, ಮಾಜಿ ಅಧ್ಯಕ್ಷ ಬಿ.ಜಿ. ರಮೇಶ್, ಹಾರಂಗಿ ಕಾವೇರಿ ಮೀನುಗಾರರ ಸಂಘ ಅಧ್ಯಕ್ಷ ಮಹಮದ್, ಫ್ರೆಂಡ್ಸ್ ಯೂತ್ ಕ್ಲಬ್ ಅಧ್ಯಕ್ಷ ಅಂಬೆಕಲ್ ಚಂದ್ರಶೇಖರ್, ಗೌರವಾಧ್ಯಕ್ಷ ಕುಂಞಕೃಷ್ಣ, ಕಾರ್ಯದರ್ಶಿ ಶಂಕರ ನಾರಾಯಣ, ಸದಸ್ಯರುಗಳಾದ ಕಿಟ್ಟಣ್ಣ ರೈ ಮತ್ತಿತರರು ಇದ್ದರು.

ಇದೇ ಸಂದರ್ಭ ಗ್ರಾಮೀಣ ಕ್ರೀಡಾಕೂಟದಲ್ಲಿ ಪ್ರಾಥಮಿಕ ಶಾಲಾ ಮಕ್ಕಳ ಕಬಡ್ಡಿ ವಿಭಾಗದಲ್ಲಿ ಪ್ರಥಮ ಭಜರಂಗಿ ಫ್ರೆಂಡ್ಸ್, ದ್ವಿತೀಯ ಸೆವೆನ್ ಸ್ಟಾರ್ ತಂಡಗಳು ಬಹುಮಾನವನ್ನು ಪಡೆದುಕೊಂಡವು. ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಟೀಂ ಅಫಿಶಿಯಲ್, ದ್ವಿತೀಯ ನವೀನ್ ಎಫ್.ಸಿ., ಮುಕ್ತ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಬಿವೈಸಿ ಮಳ್ಳೂರು, ದ್ವಿತೀಯ ಸ್ಥಾನ ವೀರಾಜಪೇಟೆ ಫ್ರೆಂಡ್ಸ್, ತೃತೀಯ ಸ್ಥಾನ ಪಂಚಲಿAಗೇಶ್ವರ ಟೀಂ ಪಡೆದುಕೊಂಡವು. ಮಹಿಳೆಯರಿಗೆ ಆಯೋಜಸಲಾಗಿದ್ದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಲೀಲಾವತಿ ಫ್ರೆಂಡ್ಸ್ ಪ್ರಥಮ, ದ್ವಿತೀಯ ಸ್ಥಾನ ಯುವಬಳಗ ಮಂಜಿಕೆರೆ, ಹಗ್ಗಜಗ್ಗಾಟ ಪುರುಷರ ವಿಭಾಗದಲ್ಲಿ ಟೀಂಬರ್ ಬಾಯ್ಸ್ ಮುಳ್ಳೂರು, ದ್ವಿತೀಯ ಸ್ಥಾನ ಫ್ರೆಂಡ್ಸ್ ಯೂತ್ ಕಾನ್‌ಬೈಲ್, ಮಹಿಳೆಯರ ವಿಭಾಗದಲ್ಲಿ ಲೀಲಾವತಿ ಫ್ರೆಂಡ್ಸ್ ಪ್ರಥಮ, ದ್ವಿತೀಯ ನಾಕೂರು ಕಾಲೋನಿ ತಂಡಗಳು ಪಡೆದು ಕೊಂಡವು. ವಿಜೇತ ಕ್ರೀಡಾ ತಂಡಗಳಿಗೆ ಅತಿಥಿಗಳು ಬಹುಮಾನ ನೀಡಿದರು.