ಪೊನ್ನಂಪೇಟೆ, ಮಾ. ೬: ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ವತಿಯಿಂದ ೬೦ ದಿನಗಳ ಹೊಲಿಗೆ ತರಬೇತಿ ಪಡೆದ ಪೊನ್ನಂಪೇಟೆ ಶಿವ ಕಾಲೋನಿಯ ೩೦ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಮತ್ತು ಹೊಲಿಗೆ ತರಬೇತಿ ಪ್ರಮಾಣ ಪತ್ರವನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ವಿತರಿಸಿದರು.
ಶಿವಕಾಲೋನಿಯ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು ಶಿವಕಾಲೋನಿಯಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಹೊಲಿಗೆ ತರಬೇತಿಯನ್ನು ಹಗಲು ಹೊತ್ತಿನ ಬದಲು ಸಂಜೆಯ ಸಮಯದಲ್ಲಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ ಕಾರಣ ಯಾವುದೇ ತೊಂದರೆ ಇಲ್ಲದೆ ಫಲಾನುಭವಿಗಳು ಹೊಲಿಗೆ ತರಬೇತಿ ಪಡೆಯಲು ಸಾಧ್ಯವಾಗಿದೆ.
ಟೈಲರಿಂಗ್ ವೃತ್ತಿಯಿಂದ ಮಹಿಳೆಯರು ಸ್ವಾವಲಂಬನೆಯಿAದ ಬದುಕು ಸಾಗಿಸಲು ಸಾಧ್ಯವಾಗುತ್ತದೆ ಎಂದರು. ಈ ಸಂದರ್ಭ ಪೊನ್ನಂಪೇಟೆ ಬಾಬು ಜಗಜೀವನ್ ರಾಮ್ ಸ್ವ-ಸಹಾಯ ಸಂಘದ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು. ಪೊನ್ನಂಪೇಟೆ ಗ್ರಾ.ಪಂ. ಸದಸ್ಯರಾದ ಮೂಕಳೆರ ಮಧುಕುಮಾರ್, ಅಡ್ಡಂಡ ನಿಲನ್, ಪೊನ್ನಂಪೇಟೆ ಶಕ್ತಿ ಕೇಂದ್ರ ಪ್ರಮುಖ ಕೋಟೆರ ಕಿಶನ್ ಉತ್ತಪ್ಪ, ಬಿಜೆಪಿ ಜಿಲ್ಲಾ ಖಜಾಂಚಿ ಗುಮ್ಮಟಿರ ಕಿಲನ್ ಗಣಪತಿ, ರಾಷ್ಟಿçÃಯ ಮಾನವ ಹಕ್ಕುಗಳ ಜಾಗೃತಿ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಆರ್. ಶಿವಕುಮಾರ್ ಗೌಡ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪೊನ್ನಂಪೇಟೆ ಶಾಖೆ ವ್ಯವಸ್ಥಾಪಕ ಹೆಚ್.ಕೆ. ಲೋಹಿತ್, ತಾಲೂಕು ಕೃಷಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ತೋರಿರ ವಿನು,ಎಲ್ಲಾ ಶಕ್ತಿ ಕೇಂದ್ರ ಪ್ರಮುಖರು, ಕಾರ್ಯಕರ್ತರು, ಪೊನ್ನಂಪೇಟೆ ಡಾ. ಬಾಬು ಜಗಜೀವನ್ ರಾಮ್ ಸ್ವ-ಸಹಾಯ ಸಂಘದ ಅಧ್ಯಕ್ಷೆ ಮಂಜುಳ, ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಜಿಲ್ಲಾ ಸಂಯೋಜಕ ದಿನೇಶ್, ಸಹಾಯಕ ಜಿಲ್ಲಾ ಸಂಚಾಲಕ ಸಂತೋಷ್ ಕುಮಾರ್ ಇನ್ನಿತರರು ಹಾಜರಿದ್ದರು.