ನಾಪೋಕ್ಲು, ಮಾ. ೬: ಇತಿಹಾಸ ಪ್ರಸಿದ್ಧ ಶ್ರೀ ಪಾಡಿ ಇಗ್ಗುತ್ತಪ್ಪ ದೇವಸ್ಥಾನ ಕಕ್ಕಬ್ಬೆಯಲ್ಲಿ ನಾಪೋಕ್ಲುವಿನ ಶೌರ್ಯ ಸದಸ್ಯರಿಂದ ಶ್ರಮದಾನ ನಡೆಸಲಾಯಿತು. ಪಾಡಿ ಶ್ರೀ ಇಗ್ಗುತ್ತಪ್ಪ ಕ್ಷೇತ್ರದ ಹೂದೋಟಗಳಲ್ಲಿ ಬೆಳೆದಿದ್ದ ಕಳೆ ಸಸ್ಯಗಳನ್ನು ಕಿತ್ತು, ಹೂದೋಟವನ್ನು ಕಳೆಮುಕ್ತಗೊಳಿಸಲಾಯಿತು. ದೇವಸ್ಥಾನದ ಸುತ್ತಲೂ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ, ಅಲ್ಲಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌ಗಳನ್ನು ಹೆಕ್ಕಿ ಒಂದೆಡೆ ಹಾಕಿ ದೇವಸ್ಥಾನದ ಸ್ವಚ್ಛತಾ ಕಾರ್ಯವನ್ನು ನಡೆಸಿದರು. ಸೇವಾ ಕಾರ್ಯದಲ್ಲಿ ಬಾಳೆಯಡ ದಿವ್ಯ, ದಿಲೀಶ್ ಎನ್.ಬಿ., ಶಂಕರ್ ಬಿ.ಹೆಚ್., ಉಮಾಲಕ್ಷಿö್ಮ, ಶ್ಯಾಮಲಾ, ಚಂದ್ರಕಲಾ, ಸರಸ್ವತಿ, ರವಿ, ರಾಹುಲ್ ಭಾಗವಹಿಸಿದ್ದರು.